

ಬಸವಕಲ್ಯಾಣ: ಜಾತಿಗಳು ಮಾನವ ಸೃಷ್ಟಿಸಿಕೊಂಡಿರುವ ವ್ಯವಸ್ಥೆ. ಇದರಿಂದ ನಮ್ಮ ದೇಶದ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಜಾತಿ, ಧರ್ಮಗಳಿಂದ ಮಹಾತ್ಮರನ್ನು ಅಳೆಯುವ ಕೆಟ್ಟ ಪದ್ಧತಿ ರೂಢಿಯಾಗುತ್ತಿರುವುದು ಶೋಚನೀಯ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎಸ್.ದಿವಾಕರ್ ಹೇಳಿದರು.
ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 4ನೇ ಬಸವ ಬೆಳದಿಂಗಳ ಶರಣ ಸಂಗಮದಲ್ಲಿ ವೈರಾಗ್ಯ ನಿಧಿ ಅಕ್ಕಮಹಾದೇವಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ ಉಪಪ್ರಧಾನಿ ಬಾಬುಜಗಜೀವನ ರಾಮ್ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮರ ತತ್ವ-ಸಂದೇಶಗಳನ್ನು ತಿಳಿದುಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.
ವಿನೂತನ ವಿಚಾರಗಳನ್ನು ಸಮಾಜಕ್ಕೆ ಪ್ರಚಾರಗೊಳಿಸಲಿಕ್ಕಾಗಿಯೇ ಬಸವಪ್ರಭು ಶ್ರೀಗಳು ಉತ್ತಮ ಪರಿಸರದಲ್ಲಿ ಕಲ್ಯಾಣ ಮಹಾಮನೆ ನಿಮರ್ಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಕ್ತಿ-ವಿರಕ್ತಿಗಳ ಸಂಗಮವಾಗಿದ್ದ ಅಕ್ಕಮಹಾದೇವಿ ವಚನಗಳಲ್ಲಿ ಅನನ್ಯ ದೇವ ಪ್ರೇಮ, ಗುರು ಬಸವಭಕ್ತಿ, ಶರಣರ ಸಂಗದ ಮಹತ್ವತೆ ಅದ್ಭುತವಾಗಿ ಮೂಡಿಬಂದಿದೆ. ದೇವ ವಿರಹಿಯಾದ ಅಕ್ಕ ಲೌಕಿಕ ಇಷ್ಟಾರ್ಥಗಳನ್ನೆಲ್ಲ ತ್ಯಜಿಸಿ, ಚನ್ನಮಲ್ಲಿಕಾಜರ್ುನ ದೇವನಿಗಾಗಿ ಹಂಬಲಿಸುತ್ತ ಅಂತರಂಗದ ಕದಳಿಯ ಬನವ ಹೊಕ್ಕು, ಅಲ್ಲಮ ಪ್ರಭುವಿನ ಪರೀಕ್ಷೆಯಲ್ಲಿ ಗೆದ್ದು ಜಗನ್ಮಾತೆ ಎನಿಸಿದ್ದಾರೆ. ಅವರ ಬದುಕು ಆಧ್ಯಾತ್ಮಿಕ ಆಸಕ್ತರಿಗೆ ದಿವ್ಯ ಪ್ರೇರಣೆಯಾಗಿದೆ ಎಂದರು.
ರಾಯಚೂರು ಮುರಾರ್ಜಿ ದೇಸಾಯಿ ಕಾಲೇಜಿನ ಪ್ರಾಂಶುಪಾಲ ಸೋಮನಾಥ ಡಿ. ಉಪನ್ಯಾಸ ನೀಡಿ, ಅಕ್ಕಮಹಾದೇವಿ ಅವರು ಹೆಣ್ಣುಕುಲದ ಸ್ಫೂತರ್ಿದಾತೆ. ಅವರ ಆಧ್ಯಾತ್ಮಿಕ ಬದುಕು ಇಂದಿನ ಸನ್ಯಾಸಿಗಳಿಗೆ ದಿವ್ಯ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ಶ್ರೀ ನಿಜಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಚಿಂತಕ ಸಿದ್ರಾಮ ಶೆಟಕಾರ ಪ್ರಾಸ್ತಾವಿಕ ಮಾತನಾಡಿದರು. ಸವದತ್ತಿಯ ಬಸವನಗೌಡ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ದಿಲೀಪ ಶಿಂಧೆ, ಅಜರ್ುನ ಕನಕ, ಯುವರಾಜ ಭೆಂಡೆ, ಶೀತಲ್ಕುಮಾರ ಶಿಂಧೆ, ಪುಲ್ಲಿಂದ ಹುಬ್ಬಾರೆ, ಬಸವರಾಜ ಹೊನ್ನಾ, ಶಾಂತಪ್ಪ ದುಬಲಗುಂಡಿ, ಧರ್ಮಣ್ಣ ಕಣಮಸ್, ಶ್ರೀದೇವಿ ಉಜಳಂಬೆ, ಶ್ರೀದೇವಿ ಕಾಕನಾಳೆ, ದಾನೇಶ್ವರಿ ಸಂಖ, ಮಹಾದೇವಿ ತಾಂಬೋಳೆ, ಮಲ್ಲಮ್ಮ ಮಾಳಿ, ಕಲ್ಪನಾ ಪಾಟೀಲ್, ಶೋಭಾ ಪಾಟೀಲ್, ಸುಶೀಲಾಬಾಯಿ ನಿಣರ್ಾ, ವಿಠಲ ಮೇತ್ರೆ, ರಾಮು, ಮಲ್ಲಿಕಾಜರ್ುನ ಮಾಳಿ, ನರಸಪ್ಪ ಮಾಳಿ ಇತರರಿದ್ದರು. ನಾಗೇಂದ್ರಪ್ಪ ನಿಂಬರಗಿ ಸ್ವಾಗತಿಸಿದರು. ಸೂರ್ಯಕಾಂತ ವಂದಿಸಿದರು. ಸಂಗಮೇಶ ತೊಗರಖೇಡ ನಿರೂಪಣೆ ಮಾಡಿದರು.