ಜಾತಿ ವ್ಯವಸ್ಥೆ ಸಮಾಜಕ್ಕೆ ಮಾರಕ

13Savadatti1
ಸವದತ್ತಿಯಲ್ಲಿ ಶಿವಾನಂದ ತಾರಿಹಾಳ, ಪ್ರತಿಭಾ ವಕ್ಕುಂದ ಅವರಿಗೆ ಸಿಜಿಕೆ ರಂಗ ಪುರಸ್ಕಾರ ಮತ್ತು ಅನಿತಾ ದಿನ್ನಿಮನಿ ಅವರಿಗೆ ರಂಗ ಸಂಗಾತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಾಕೀರ್ ನದಾಪ, ಮಾರುತಿ ದೊಂಬರ, ಕೆ.ರಾಮರೆಡ್ಡಿ, ಡಾ.ಆರುಂಧತಿ ಬದಾಮಿ, ಸುನಂದಾ ಹತ್ತಿ, ಶಾಂಭವಿ ಬಡಿಗೇರ ಇದ್ದರು.
Published on

ಸವದತ್ತಿ: ಸಮಾಜದಲ್ಲಿನ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಅಸಮಾನತೆ ತೊಲಗಿಸಲು ರಂಗಭೂಮಿಯ ಸಂಸ್ಕಾರ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಜಾತಿ ವ್ಯವಸ್ಥೆ ಸಮಾಜಕ್ಕೆ ಮಾರಕ ಎಂದು ರಂಗ ನಿರ್ದೇಶಕ ಜಾಕೀರ್ ನದಾಪ ಹೇಳಿದರು.

ಇಲ್ಲಿನ ಎಸ್‌ವಿಎಸ್ ಬೆಳ್ಳುಬ್ಬಿ ಕಾಲೇಜಿನಲ್ಲಿ ಬುಧವಾರ ಕನ್ನಡ ವಿಭಾಗ, ರಂಗ ಆರಾಧನ ಮತ್ತು ಬೆಂಗಳೂರಿನ ಬೀದಿ ನಾಟಕ ಅಕಾಡೆಮಿಯಿಂದ ಬುಧವಾರ ಏರ್ಪಡಿಸಿದ್ದ ಜಾಳ್ ಪೋಳ್ ನಾಟಕ ಪ್ರದರ್ಶನ ಮತ್ತು ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗಭೂಮಿ ಕೇವಲ ಮನರಂಜನೆಗೆ ಮಾತ್ರವಲ್ಲದೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವಂತೆ ಧೈರ್ಯ ನೀಡುತ್ತದೆ. ರಂಗ ಸಂಸ್ಕಾರದಿಂದ ಹೆಣ್ಣು ಧೈರ್ಯವಂತಳಾಗುತ್ತಾಳೆ. ನಾಟಕ ಪ್ರದರ್ಶನಗಳ ಮೂಲಕ ಸಮಾಜದಲ್ಲಿನ ನ್ಯೂನತೆಗಳನ್ನು ಹೋಗಲಾಡಿಸಿ, ಜನತೆಯಲ್ಲಿ ಅರಿವು ಮೂಡಿಸುವ ಕಾರ್ಯ ರಂಗ ಆರಾಧನ ಸಂಸ್ಥೆಯಿಂದ ನಿರಂತರ ನಡೆಯುತ್ತಲೇ ಇದೆ ಎಂದರು.

ಶಿವಾನಂದ ತಾರಿಹಾಳ, ಪ್ರತಿಭಾ ವಕ್ಕುಂದ ಅವರಿಗೆ ಸಿಜಿಕೆ ರಂಗ ಪುರಸ್ಕಾರ ಮತ್ತು ಅನಿತಾ ದಿನ್ನಿಮನಿ ಅವರಿಗೆ ರಂಗ ಸಂಗಾತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾಚಾರ್ಯ ಮಾರುತಿ ದೊಂಬರ, ಕೆ.ರಾಮರೆಡ್ಡಿ, ಡಾ.ಆರುಂಧತಿ ಬದಾಮಿ, ಸುನಂದಾ ಹತ್ತಿ, ಶಾಂಭವಿ ಬಡಿಗೇರ ಹಾಗೂ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net