ಜಾತಿ ಪಿಡುಗು ಹೋಗಲಾಡಿಸಿದ ಸಂತ ಶ್ರೇಷ್ಠ

bkt-18-4
ಬಾಗಲಕೋಟೆ ನಗರದಲ್ಲಿರುವ ತಮ್ಮ ಜನ ಸಂಪರ್ಕ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನಕ ದಾಸರ ೫೩೭ ನೇ ಜಯಂತಿ ಕಾರ್ಯಕ್ರಮ. ವಿ.ಪ ಸದಸ್ಯ ಪಿ.ಎಚ್.ಪೂಜಾರ, ಶಂಭುಗೌಡ ಪಾಟೀಲ, ಸಂಗಪ್ಪ ಕುಪ್ಪಸ್ತ , ಕುಮಾರ ಗಿರಿಜಾ, ಗಂಗಪ್ಪ ಕರಡಿ, ಬಸಪ್ಪ ಮಂಗಾಟಿ, ಚಂದ್ರಕಾಂತ ಕೇಸನೂರ, ಸಂಗನಗೌಡ ಗೌಡರ, ಮಲ್ಲಿಕಾರ್ಜುನ ಭೂಸರೆಡ್ಡಿ ಇತರರು ಇದ್ದರು.
Published on

ಬಾಗಲಕೋಟೆ: ಭಕ್ತ ಕನಕದಾಸರು ನಮ್ಮ ಭಾರತೀಯ ಧರ್ಮ ಪರಂಪರೆ ಉತ್ಕರ್ಷ ರಾಮಾಯಣ ಮಹಾಭಾರತ ಸಂಪೂರ್ಣ ಗ್ರಂಥಗಳ ಅಧ್ಯಯನ ಮಾಡಿ ವ್ಯಾಸರಾಯರ ಮುಖಾಂತರ ದೀಕ್ಷೆಯನ್ನು ಪಡೆದು ಸಂತ ಶ್ರೇಷ್ಠರಾದರು ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ನಗರದಲ್ಲಿರುವ ತಮ್ಮ ಜನ ಸಂಪರ್ಕ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನಕ ದಾಸರ ೫೩೭ ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಾಸ ಶ್ರೇಷ್ಠರಾಗಿದ್ದ ನಾಡಿನುದ್ದಕ್ಕೂ ದಾಸವಾನೆ ಮುಖಾಂತರ ಜಾತಿ ಪಿಡುಗನ್ನು ಹೋಗಲಾಡಿಸಲು ದಾಸವಾಣಿ ಮುಖಾಂತರ ತಿಳಿಸಿಕೊಟ್ಟರು. ನಾಡಿನ ದಾಸ ಸಾಹಿತ್ಯ, ಸಂಗೀತಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶಂಭುಗೌಡ ಪಾಟೀಲ, ಸಂಗಪ್ಪ ಕುಪ್ಪಸ್ತ , ಕುಮಾರ ಗಿರಿಜಾ, ಗಂಗಪ್ಪ ಕರಡಿ, ಬಸಪ್ಪ ಮಂಗಾಟಿ, ಚಂದ್ರಕಾಂತ ಕೇಸನೂರ, ಸಂಗನಗೌಡ ಗೌಡರ, ಮಲ್ಲಿಕಾರ್ಜುನ ಭೂಸರೆಡ್ಡಿ, ರಾಜು ಚಿತ್ತವಾಡಗಿ, ಡಾ.ಕೃಷ್ಣ ಚೌದರಿ, ಸಂಜೀವ ಡಿಗ್ಗಿ, ಯಲ್ಲಪ್ಪ ಅಂಬಗೇರ, ರಾಜು ಶ್ರೀರಾಮ, ಅನಂತ ಮಳಗಿ, ಗಂಗಾಬಾಯಿ ರಜಪೂತ, ಶಾಂತಾಬಾಯಿ ಗೋಣಿ, ರಾಜು ಲಮಾಣಿ, ಆಸಂಗೇಪ್ಪ ತಳವಾರ, ಮಂಜುನಾಥ ಚೌವ್ಹಾಣ, ಹುಲಿಗೆಪ್ಪ ಗುರಿಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net