!ಜಾತಿ ನೆಪಯೊಡ್ಡಿ ಮದುವೇಗೆ ನಿರಾಕರಣೆ |ಮನನೊಂದ ಯುವತಿ ಆತ್ಮಹತ್ಯೆಗೆ ಶರಣು

IMG-20250621-WA0017
Published on

!ಜಾತಿ ನೆಪಯೊಡ್ಡಿ ಮದುವೇಗೆ ನಿರಾಕರಣೆ

|ಮನನೊಂದ ಯುವತಿ ಆತ್ಮಹತ್ಯೆಗೆ ಶರಣು

ಸಂಕೇಶ್ವರ : ಪ್ರೀತಿಸಿದ ಹುಡುಗ ಜಾತಿ ನೆಪ ಹೇಳಿ ಮದುವೇಗೆ ನಿರಾಕರಿಸಿದ ಹಿನ್ನಲೇ ಯುವತಿಯೊರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ನಿವಾಸಿ ಸುಪ್ರೀತಾ ಬಾಬು ಹಣಮಂತಗೊಳ (21) ಆತ್ಮಹತ್ಯೆ ಮಾಡಕೊಂಡ ಯುವತಿ. ಈಕೆ ಅದೆ ಗ್ರಾಮದ ಸಂದೀಪ ಲಕ್ಷಣ ಜೀನರಾಳೆ ಎಂಬುವ ಯುವಕನನ್ನು ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದು, ಮದುವೇಯಾಗುವಂತೆ ಯುವತಿ ಆರೋಪಿ ಸಂದೀಪನನ್ನು ಕೇಳಿಕೊಂಡಾಗ,ಆತ ಜಾತಿಯ ನೆಪ ಹೇಳಿ ಮದುವೇ ನಿರಾಕರಿಸಿದ್ದರಿಂದ ಮನನೊಂದು ಯುವತಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net