ಜಾತಿ ನಿಂದನೆ ಅಡಿ 7 ಜನರ ಬಂಧನ

crime arrest
Published on


ಹಾಸನ : ಸಕಲೇಶಪುರ ತಾಲೂಕಿನ ಮರಗುಂದ ಗ್ರಾಮದ 35 ಜನರ ವಿರುದ್ಧ ಅರಣ್ಯ ಇಲಾಖೆಯ ಹಂಗಾಮಿ ನೌಕರ ಅಭಿಲಾಷ್ ಜಾತಿ ನಿಂದನೆ ಹಾಗೂ ಹಲ್ಲೆ ದೂರು ದಾಖಲಿಸಿದ್ದು, ಗುರುವಾರ ಗ್ರಾಮಾಂತರ ಠಾಣೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.


ಮರಗುಂದ ಗ್ರಾಮದ ಗಡಿಯಿಂದ ಗ್ರಾಮದ ಹೊರವಲದಲ್ಲಿರುವ ಬೆಟ್ಟದ ಭೈರವೇಶ್ವರ ದೇವಸ್ಥಾನದ ವರಗಿನ 2 ಕಿ.ಮೀ. ರಸ್ತೆ ತೀರ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಇದನ್ನು ಮನಗಂಡ ಗ್ರಾಮಸ್ಥರು ಮನೆಮನೆಯಿಂದ ವಂತಿಗೆ ಸಂಗ್ರಹಿಸಿ ರಸ್ತೆ ದುರಸ್ತಿಪಡಿಸಲು ತಾವೇ ಉದ್ದೇಶಿಸಿ ಯಂತ್ರಗಳನ್ನು ತರಿಸಿ ಕಲ್ಲು ರಸ್ತೆಯ ಮೇಲೆ ಮಣ್ಣು ಹಾಕಲು ತೀರ್ಮಾನಿಸಿದ್ದರು.


ರಸ್ತೆ ಬದಿ ಮಣ್ಣು ತೆಗೆಯುವ ವೇಳೆ ಸ್ಥಳಕ್ಕೆ ಬಂದ ಅಭಿಲಾಷ್ ಇದು ಅರಣ್ಯಕ್ಕೆ ಸೇರುವ ಜಾಗ, ಮಣ್ಣು ತೆಗೆಯಬಾರದು ಎಂದು ಕೆಲಸ ಸ್ಥಗಿತಗೊಳಿಸಿದರು. ಈ ವೇಳೆ ಪರಸ್ಪರ ಮಾತಿಗೆ ಮಾತು ನಡೆಯಿತು. ಈ ಹಿನ್ನೆಲೆಯಲ್ಲಿ ಅಭಿಲಾಷ್ ಜಾತಿ ನಿಂದನೆ ಹಾಗೂ ಹಲ್ಲೆ ದೂರು ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net