ಜಾತಿ ಗಣತಿಯಲ್ಲಿ ಮರಾಠ ಎಂದು ನಮೂದಿಸಿ

Venkatarao Sate
Published on

ಚಾಮರಾಜನಗರ: ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಮರಾಠ ಸಮುದಾಯದವರು ಜಾತಿ ಕಾಲಂನಲ್ಲಿ ಮರಾಠ ಎಂದು ಹಾಗೂ ಉಪಜಾತಿ ಕಾಲಂನಲ್ಲಿ ಕುಣಬಿ ಎಂದು ನಮೂದಿಸಿ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ವೆಂಕಟರಾವ್ ಸಾಠೆ ಮನವಿ ಮಾಡಿದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ವತಿಯಿಂದ ಈಗಾಗಲೇ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ಒಕ್ಕೊರಲ ತೀರ್ಮಾನದಂತೆ ಸೆ.22 ರಿಂದ ನಡೆಯಲಿರುವ ಜಾತಿ ಜನಗಣತಿಯಲ್ಲಿ ಮರಾಠರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಮರಾಠ ಹಾಗೂ ಉಪಜಾತಿ ಕಾಲಂನಲ್ಲಿ ಕುಣಬಿ ಎಂದು ನಮೂದಿಸುವ ಮೂಲಕ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಮರಾಠ ಸಮುದಾಯದವರು ಸುಮಾರು 250 ಕುಟುಂಬಗಳು ಇದ್ದು, ಮರಾಠ ಜಾತಿಯಲ್ಲೂ 1510 ಕ್ಕಿಂತಲೂ ಹೆಚ್ಚಿನ ಉಪಜಾತಿಗಳು ಇದೆ. ಇದ್ಯಾವುದನ್ನು ಪರಿಗಣಿಸದೇ ಉಪಜಾತಿಯಲ್ಲಿ ಕುಣಬಿ ಹಾಗೂ ಭಾಷೆ ಕಾಲಂನಲ್ಲಿ ಮರಾಠಿ ಭಾಷೆ ಎಂದು ನಮೂದಿಸಿ ಸರ್ಕಾರ ನೀಡಿರುವ ಕಾಲಾವಕಾಶದಲ್ಲಿ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.

ಗೋಷ್ಠಿಯಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಉಪಾಧ್ಯಕ್ಷ ಚಂದ್ರಶೇಖರ್, ಶ್ರೀನಿವಾಸ್ ರಾವ್ ಸಾಲಂಕೆ, ಮಮತಾ ಬಾಯಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net