

ಚಿಕ್ಕಮಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಸೆ. ೨೨ರಿಂದ ಅ. ೭ರವರೆಗೆ ರಾಜ್ಯಸರ್ಕಾರ ನಡೆಸಲು ಉz್ದೆÃಶಿಸಿರುವ ಜಾತಿ ಗಣತಿಯನ್ನು ಖಂಡಿಸಿ ಮತ್ತು ಹಿಂದೂ ಧರ್ಮದ ೪೭ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಪದ ಸೇರಿಸಿರುವ ಕ್ರಮವನ್ನು ವಿರೋಧಿಸಿ ಗುರುವಾರ ವಿಶ್ವ ಹಿಂದೂ ಪರಿಷತ್ ಮುಖಂಡರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹಿಂದೂ ಉಪಜಾತಿಗಳಲ್ಲಿ ಸೇರಿಸಿರುವ ಕ್ರಿಶ್ಚಿಯನ್ ಪದ ಹಿಂಪಡೆಯಬೇಕು. ತಕ್ಷಣ ಸರ್ಕಾರ ಆಯೋಗಕ್ಕೆ ಸೂಚನೆ ನೀಡಿ ೪೭ ಉಪಜಾತಿಗಳ ಪಟ್ಟಿಯನ್ನು ಕೈಬಿಡಬೇಕು ಎಂಬುದನ್ನೂ ಸೇರಿದಂತೆ ವಿವಿಧ ೫ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ರಾಜ್ಯದ ಜನರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಜನಗಣತಿ ಎಂದು ಸುಳ್ಳು ಹೇಳಿ ಈಗ ಸರ್ಕಾರ ಜಾತಿಗಣತಿ ಮಾಡುತ್ತಿದೆ. ಜೊತೆಗೆ ಜಾತಿ ಎಂಬ ಹೊಸ ಕಾಲಂ ಅನ್ನು ಪ್ರಾರಂಭಿಸಿದೆ ಎಂದು ಆರೋಪಿಸಿದರು.
ಹಿಂದೂ ಜಾತಿ ಜನಾಂಗಗಳ ಜೊತೆಗೆ ಕ್ರಿಶ್ಚಿಯನ್ ಸಮುದಾಯ ಸೇರಿಸುವ ಮೂಲಕ ಹಿಂದೂಗಳ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯ ಹಾಗೂ ಸಂವಿಧಾನದಲ್ಲಿಲ್ಲದ ಪದ ಸೇರ್ಪಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಗಾಣಿಗ ಕ್ರಿಶ್ಚಿಯನ್ ಈ ರೀತಿ ೪೭ ವಿವಿಧ ಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೇರಿಸುವ ಮೂಲಕ ಮತಾಂತರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂದು ೪೦ ವಿವಿಧ ಜಾತಿಯ ಮುಖಂಡರು, ಅಧ್ಯಕ್ಷರು ಸೇರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೇ ರಾಜ್ಯಸರ್ಕಾರ ಪಟ್ಟಿಯಲ್ಲಿ ಇರುವ ಕ್ರಿಶ್ಚಿಯನ್ ಪದವನ್ನು ತೆಗೆಯಬೇಕು. ಇಲ್ಲದಿದ್ದರೆ ಸಮಸ್ತ ಹಿಂದೂಗಳು ಸಂಘಟಿತರಾಗಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಾ ಹಿಂದೂ ಧರ್ಮವನ್ನು ಒಡೆಯುವ ಯತ್ನವನ್ನು ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಹಿಂದೂ ಸಮಾಜವನ್ನು ಒಗ್ಗೂಡಿಸಿ ಮುಂದೆ ಬೃಹತ್ ಹೋರಾಟ ರೂಪಿಸುವುದಾಗಿ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಚ್.ಶ್ರೀಕಾಂತ್ ಪೈ ಮಾತನಾಡಿ, ವಿಎಚ್‌ಪಿ ನಿರ್ಣಯಕ್ಕೆ ಎಲ್ಲ ಸಮುದಾಯದ ಮುಖಂಡರು ಬದ್ಧರಾಗುವುದಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಿಂದೂ ಸಮುದಾಯದ ಎಲ್ಲರೂ ಸೇರಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಬಂಜಾರ ಸಂಘದ ಲಕ್ಷö್ಮಣ್ ನಾಯ್ಕ ಮಾತನಾಡಿ, ಹಿಂದೂಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕೀಯಕ್ಕಾಗಿ ಜಾತಿ ಸಮೀಕ್ಷೆ ನಡೆಸುವ ಮೂಲಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕುರುಬ ಸಮಾಜದ ಎಚ್.ಎಸ್ ಪುಟ್ಟೇಗೌಡ, ಪ್ರಮುಖರಾದ ಎಂ.ಬಿ ಅಶೋಕ್, ಶ್ಯಾಮ್ ವಿ ಗೌಡ, ಕೋಟೆ ರಂಗನಾಥ್, ಸೀತಾರಾಮ ಭರಣ್ಯ ಮತ್ತಿತರರಿದ್ದರು.