ಜಾತಿ ಕಾಲಂನಲ್ಲಿ ಮಡಿವಾಳ ಎಂದು ಬರೆಸಿ

Caste Census
Published on

ಮೈಸೂರು: ಜಾತಿ ಜನಗಣತಿಯಲ್ಲಿ ನಮ್ಮ ಸಮುದಾಯದವರು ಜಾತಿ ಕಾಲಂನಲ್ಲಿ ಮಡಿವಾಳ ಎಂದೇ ನಮೂದಿಸಬೇಕು ಎಂದು ಜಿಲ್ಲಾ ಮಡಿವಾಳರ ಮಹಾ ಸಂಘದ ಅಧ್ಯಕ್ಷ ಚನ್ನಕೇಶವ ತಿಳಿಸಿದರು.

ಮಡಿವಾಳ ಸಮುದಾಯಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿವೆ. ಆದರೆ ಒಟ್ಟಾರೆ ಜನಸಂಖ್ಯೆ ನಿಖರವಾಗಿ ತಿಳಿದುಬಂದಲ್ಲಿ ವಿವಿಧ ಸವಲತ್ತು ಪಡೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಜಾತಿ ಕಾಲಂನಲ್ಲಿ ಮಡಿವಾಳ ಎಂದು ಬರೆಯಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಡಿವಾಳ ಸಮುದಾಯ ಈವರೆಗೆ ಬೇರೆ ಬೇರೆ ಉಪ ಜಾತಿಗಳ ಹೆಸರಿನಲ್ಲಿ ನೋಂದಾಯಿಸಿಕೊಳ್ಳಲಾಗುತ್ತಿತ್ತು. ಇದರಿಂದ ರಾಜ್ಯದಲ್ಲಿ ಈ ಸಮುದಾಯದ ಸಂಖ್ಯೆ ಕಡಿಮೆ ಇದೆ ಎಂಬ ನಂಬಿಕೆ ಬಂದು ವಿವಿಧ ಸವಲತ್ತು ಸರ್ಕಾರದಿಂದ ದೊರಕುತ್ತಿಲ್ಲ ಎಂದರು.

ಕಳೆದ 30 ವರ್ಷದಿಂದ ಸಮುದಾಯವನ್ನು ಎಸ್‌ಸಿ ಪಟ್ಟಿಗೆ ಸೇರಿಸಬೇಕೆಂದು ಹೋರಾಟಗಳು ನಡೆದಿವೆ. ಆದರೆ, ಈವರೆಗೆ ಯಾವುದೇ ಸರ್ಕಾರ ಗಮನ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಳೆದ 2 ದಶಕಗಳಿಂದ ಸಮುದಾಯ ಬೆಂಬಲಿಸುತ್ತಲೇ ಬಂದಿದೆ. ಹೀಗಾಗಿ ಈಗಲಾದರೂ ಸಿದ್ದರಾಮಯ್ಯ ಅವರು ಸಂಪುಟ ಸಭೆಯಲ್ಲಿ ಈ ಸಮುದಾಯವನ್ನು ಎಸ್‌ಸಿ ಪಟ್ಟಿಗೆ ಸೇರ್ಪಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಸಮುದಾಯದ ಮುಖಂಡರಾದ ಮಾದುರಾಜು, ಶಿವಣ್ಣ, ರವಿಚಂದ್ರ, ದುದ್ದಗೆರೆ ಜಯರಾಮು, ಕುಕ್ಕರಹಳ್ಳಿ ಮಡಿಕಟ್ಟೆ ಶಂಕರ್, ಸಿದ್ದರಾಜು, ಪ್ರಶಾಂತ್, ಶಂಕರ್, ರಂಗಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net