ಜಾತಿ ಆಧಾರಿತ ಚುನಾವಣೆ-ಅಧಿಕಾರ ಭ್ರಮೆ

b y vijyendra
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ
Published on

ಬಾಗಲಕೋಟೆ: ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಕಿತ್ತಾಟ ನೋಡಿ ರಾಜ್ಯದ ಜನ ಹಾಸ್ಯ ಮಾಡಿ ನಗುತ್ತಿದ್ದಾರೆ. ಬಿಜೆಪಿಗೆ ಕೇಂದ್ರದಲ್ಲಿ ದಿಟ್ಟ ನಾಯಕತ್ವ ಇದೆ..ರಾಜ್ಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯಡಿಯೂರಪ್ಪ ರೀತಿ ಜನಪರ ಆಡಳಿತ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಇಳಕಲ್ಲ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಾತಿ ರಾಜಕಾರಣ ವಿಚಾರ ದುರಾದೃಷ್ಟ. ಅಣ್ಣ ಬಸವಣ್ಣನವರ ನಾಡಾದ ಕರ್ನಾಟಕದಲ್ಲಿ
ಜಾತಿ ರಾಜಕಾರಣ ಸರಿಯಲ್ಲ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಎಂದವರು ಬಸವಣ್ಣ.ರಾಜ್ಯದಲ್ಲಿ ಆ ರೀತಿ ಆಡಳಿತ ಕೊಟ್ಟವರು ದೇವರಾಜ ಅರಸು. ಅರಸು ನಂತರ ತುಳಿತಕ್ಕೆ ಒಳಗಾದ ಸಮಾಜಗಳಿಗೆ, ರೈತರು, ದಲಿತರು, ಹಿಂದುಳಿದವರ ಪರ ಆಡಳಿತ ನೀಡಿದ್ದು ಯಡಿಯೂರಪ್ಪ ಅವರು. ಹೀಗಾಗಿ ಜನ ಬಿಎಸ್ ವೈ ಅವರನ್ನು ಜನ ನಾಯಕ ಅನ್ನುತ್ತಾರೆ. ಹೀಗಾಗಿ ಜಾತಿ ಆಧಾರಿತವಾಗಿ ಚುನಾವಣೆ ಗೆಲ್ಲುತ್ತೇವೆ, ಅಧಿಕಾರ ಹಿಡಿಯುತ್ತೇವೆ ಎನ್ನುವುದು ಭ್ರಮೆ ಎಂದರು.

ನಮ್ಮ ತಂದೆ ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ನೀವು ಯಾರಾದರೂ ಶಿಕಾರಿಪುರದಲ್ಲಿ ಸ್ಪರ್ಧಿಸುವ ಎಂದು ಕ್ಷೇತ್ರದ ಮುಖಂಡರನ್ನು ಕೇಳಿದರು. ಕ್ಷೇತ್ರದ ಜನತೆ ತಾವೆ ನಿಲ್ಲಬೇಕು. ಇಲ್ಲ ನಿಮ್ಮ ಮಗನನ್ನು ನಿಲ್ಲಿಸಿ ಅಂತ ಕೇಳಿದರು. ಆ ಹಿನ್ನೆಲೆ ನಮ್ಮ ತಂದೆಯವರು ನನ್ನ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯಾಗಬೇಕಾದರು ಅಂತಿಮವಾಗಿ ನಮ್ಮ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಬೇಕು. ಹಾಗಾಗಿ ಮುಂದಿನ ದಿನಮಾನದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ. ಈ ವಿಚಾರವಾಗಿ ಯಾವುದೇ ಪಕ್ಷಗಳ ಮುಖಂಡರ ಹೇಳಿಕೆಗೆ ನಾನು ಉತ್ತರಿಸುವದಿಲ್ಲ ಎಂದರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net