ಜಾಗೃತಿ ಮೂಡಿಸಿದ ಕರವೇ ಕರ‍್ಯಕರ್ತರು

oplus_0
oplus_0
Published on

ಕೊಡೇಕಲ್: ರಾಜ್ಯ ಹೆದ್ದಾರಿಯಲ್ಲಿ ಕಣ್ಣಿಗೆ ಕಾಣದ ಹಾಗೆ ಬಿದ್ದಿರುವ ತಗ್ಗಗಳನ್ನು ಪ್ರಯಾಣಿಕರಿಗೆ ಎಚ್ಚರಿಸುವ ದೃಷ್ಟಿಯಿಂದ ಕರವೇ ಕರ‍್ಯಕರ್ತರು ಸೋಮವಾರ ತಗ್ಗುಗಳಿಗೆ ಬಣ್ಣ ಹಚ್ಚುವ ಮೂಲಕ ಗಮನ ಸೆಳೆದರು.

ಹುಣಸಗಿಯಿಂದ ನಾರಾಯಣಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಖ್ಯೆ ೧೫೫ರಲ್ಲಿ ಬಿದ್ದರುವ ತೆಗ್ಗುಗಳ ಬಗ್ಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ದ ಕರ‍್ಯಕರ್ತರ ಸಾಮಾಜಿಕ ಕರ‍್ಯ ಮಾಡಿದ್ದಾರೆ.

ಕೊಡೇಕಲ್‌ನಿಂದ ರಾಜನಕೋಳೂರ ಗ್ರಾಮಕ್ಕೆ ತೆರಳುವ ಹೆದ್ದಾರಿಯಲ್ಲಿ ಕುಸಿತ ಉಂಟಾಗಿ ಕಣ್ಣಿಗೆ ಕಾಣಿಸದಂತಹ ತೆಗ್ಗು ಬಿದ್ದಿವೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರ ಮಾಡುವ ಕಾರು, ಜೀಪು ಮತ್ತು ದ್ವಿಚಕ್ರ ವಾಹನ ಸವಾರರು ಹಲವು ಬಾರಿ ಬಿದ್ದು ಪೆಟ್ಟು ಮಾಡಿಕೊಂಡ ಘಟನೆ ಕೂಡ ನಡೆದಿವೆ. ಆದರೆ ದುರಸ್ತಿ ಮಾಡಬೇಕಾದ ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಈ ಕುರಿತು ಗಮನ ಹರಿಸದ ಕಾರಣ ಸೋಮವಾರ ಖುದ್ದಾಗಿ ಕರವೇ ಕರ‍್ಯಕರ್ತರು ತಗ್ಗು ಇರುವ ಎರಡು ಕಡೆಗಳಲ್ಲಿ ಬಿಳಿಪೇಂಟ್ ಬಳಿಯುವ ಮೂಲಕ ಎಚ್ಚರಿಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ತಾಲೂಕಾಧ್ಯಕ್ಷ ರಮೇಶ ಬಿರಾದಾರ, ತಗ್ಗುಗಳ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಸ್ಪಂದಿಸದ ಕಾರಣ ಪ್ರಯಾಣಿಕರಿಗೆ ಎಚ್ಚರಿಸುವ ಕೆಲಸ ಮಾಡುತ್ತಿz್ದೆÃವೆ ಎಂದು ಹೇಳಿದರು. ಈಗಲಾದರೂ ಅಧಿಕಾರಿಗಳು ಹೆದ್ದಾರಿಯಲ್ಲಿ ಬಿದ್ದಿರುವ ತಗ್ಗಳನ್ನು ಮುಚ್ಚುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಬಸವರಾಜ ದೊಡಮನಿ, ಕರವೇ ಯುವ ಘಟಕ ಅಧ್ಯಕ್ಷ ರಮೇಶ ದೊರಿ, ಮಹೇಶ ಹೂಗಾರ, ಪರಶುರಾಮ ಕಟ್ಟಿಮನಿ, ಮೃತ್ಯುಂಜಯ ಕೋಳೂರ ಇದ್ದರು. ಈ ವೇಳೆ ಕರವೇ ಕರ‍್ಯಕರ್ತರು ಮಾಡುತ್ತಿರುವ ಈ ಕರ‍್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net