

ಬಾಗಲಕೋಟೆ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಜಾಗತಿಕ ಪದ್ದತಿಯನ್ನಾಗಿ ಮಾಡಲು ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಹೇಮಾವತಿ ಪಸ್ತಾಪೂರ ಬುಧವಾರ ಚಾಲನೆ ನೀಡಿದರು.
ಜಾಗೃತಿ ಜಾಥಾ ನವನಗರದ ಜಿಲ್ಲಾ ಆಸ್ಪತ್ರೆಯಿಂದ ಪ್ರಾರಂಭವಾಗಿ ನಗರದ ನಾನಾ ಭಾಗಗಳಲ್ಲಿ ಸಂಚರಿಸಿ ವಿದ್ಯಾಗಿರಿ ಸರ್ಕಲ್‌ಗೆ ಮುಕ್ತಾಯಗೊಂಡಿತು. ಜಾತಾದಲ್ಲಿ ಜಾಥಾದುದ್ದಕ್ಕೂ ಜಾಗೃತಿಯ ಘೋಷಣೆಗಳನ್ನು ಕೂಗಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ಮಾನಸಿಕ ಆರೋಗ್ಯ ಅಧಿಕಾರಿ ಡಾ.ಎಸ್.ಸಿ.ಪರೀಲ್ ಸೇರಿದಂತೆ ಆರೋಗ್ಯ ವಿಭಾಗದ ಸಿಬ್ಬಂದಿಗಳಾದ ಆನಂದ, ಸಂದೀಪ್ ಪಾಲ್ಗೊಂಡಿದ್ದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಡಾ.ರವಿ ಸಿ ಅವರು ಉಪನ್ಯಾಸ ನೀಡಿದರು. ಒತ್ತಡ ಜೀವನದಿಂದ ಹೊರಬಂದು ಸುಖಮಯ ಸಮಾಧಾನ ಜೀವನ ನಡೆಸಬೇಕು. ಮಾನಸಿಕ ರೋಗಕ್ಕೂ ಉಪಚಾರಉಂಟು ಎಂದು ತಿಳಿಸಿದರು.