ಜಾಗೃತವಾಗದಿದ್ದರೆ ಹಿಂದು ಸಮಾಜಕ್ಕೆ ಉಳಿಗಾಲವಿಲ್ಲ

klb1
ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ವಿಶ್ವ ಹಿಂದು ಪರಿಷದ್ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದು ಪರಿಷದ್ ಷಷ್ಠಿಪೂರ್ತಿ ಮಹೋತ್ಸವದಲ್ಲಿ ಕ್ಷೇತ್ರ ಧರ್ಮ ಪ್ರಸಾರ ಪ್ರಮುಖ ಸೂರ್ಯನಾರಾಯಣ ಮಾತನಾಡಿದರು. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ, ಶ್ರೀ ಕೇದಾರಲಿಂಗ ಸ್ವಾಮೀಜಿ ಇತರರಿದ್ದರು.
Published on

ಸೇಡಂ: ದಿನ ಕಳೆದಂತೆ ಹಿಂದುಗಳಲ್ಲಿ ಜಾತಿ ಭಾವನೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ನಾವು ಜಾಗೃತರಾಗದಿದ್ದರೆ ನಮ್ಮ ಅಸ್ಮಿತೆಗಾಗಿ ಹೋರಾಟ ನಡೆಸುವ ಪ್ರಸಂಗ ಎದುರಾಗುವ ದಿನಗಳು ದೂರವಿಲ್ಲ ಎಂದು ವಿಶ್ವ ಹಿಂದು ಪರಿಷದ್‌ನ ಕ್ಷೇತ್ರ ಧರ್ಮ ಪ್ರಸಾರ ಪ್ರಮುಖ ಸೂರ್ಯನಾರಾಯಣ ಎಚ್ಚರಿಸಿದರು.

ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ವಿಶ್ವ ಹಿಂದು ಪರಿಷದ್‌ನಿಂದ ಭಾನುವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದು ಪರಿಷದ್ ಷಷ್ಠಿಪೂರ್ತಿ ಮಹೋತ್ಸವದಲ್ಲಿ ಮುಖ್ಯವಕ್ತಾರರಾಗಿ ಮಾತನಾಡಿ, ಮನೆಯ ಪುಟಾಣಿಗಳಿಗೆ ಕೃಷ್ಣ-ರಾಧೆಯರ ವೇಷ ತೊಡಗಿಸಿ ಸಂಭ್ರಮ ಪಡುತ್ತಿz್ದೆÃವೆ. ಮುಂದಿನ ಬಹು ವರ್ಷಗಳ ಕಾಲ ಕೃಷ್ಣನ ಸ್ಮರಣೆ ಮಾಡಬೇಕು ಎನ್ನುವುದಾದರೆ ಇಂದಿನಿAದಲೇ ನಾವು ಜಾಗೃತರಾಗಬೇಕಾಗಿದೆ ಎಂದರು.

ಸಕಲ ಜೀವರಾಶಿಗಳಿಗೂ ಒಳಿತು ಬಯಸುವ ಧರ್ಮದವರು ನಾವಾಗಿz್ದÉÃವೆ. ಕೆಲ ಜಿಹಾದಿ ಮನಸ್ಥಿತಿಯವರು ಹಿಂದು ಧರ್ಮವನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಅಂಥವರಿಗೆ ಅವರ ಭಾಷೆಯಲ್ಲಿ ಬುದ್ಧಿ ಕಲಿಸಬೇಕಾದ ಅವಶ್ಯಕತೆಯಿದೆ. ಸನಾತನಿಗಳು ಹೊಸ ಮನೆ ಕಟ್ಟಿದರೆ ಮೊದಲು ಮನೆಯಲ್ಲಿ ಗೋವಿನ ಪ್ರವೇಶ ಮಾಡಿಸುತ್ತೇವೆ. ಗೋವನ್ನು ದೇವರು ಎಂದು ಪೂಜಿಸುವ ನಮ್ಮ ದೇಶದಲ್ಲಿ ಗೋವಿನ ರಕ್ತದ ಹೊಳೆ ಹರಿಸುವ ಕೆಲಸ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಗುಂಡೇಪಲ್ಲಿಯ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ, ಬೆನಕನಹಳ್ಳಿಯ ಶ್ರೀ ಕೇದಾರಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬಾಲ ಸಂಸ್ಕಾರ ಕೇಂದ್ರದ ಸಂಚಾಲಕ ಸೂರ್ಯನಾರಾಯಣ ಚಿಮ್ಮನಚೋಡಕರ್, ವಿಎಚ್‌ಪಿ ಕರ್ನಾಟಕ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಮಾತೃಶಕ್ತಿ ಪ್ರಮುಖೆ ಶೀಲಾ ನಿರ್ಣಿ, ಮಹಾದೇವ ಅಂಗಡಿ ಇದ್ದರು.
ನೂರಾರು ಚಿಣ್ಣರು ಕೃಷ್ಣ-ರಾಧೆಯರ ವೇಷತೊಟ್ಟು ಸಂಭ್ರಮಿಸಿದರು. ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು. ಭವಾನಿ ಕೇಶ್ವಾರ ಪ್ರಾರ್ಥಿಸಿದರು. ಸಂಧ್ಯಾ ಕುಲಕರ್ಣಿ ಸ್ವಾಗತಿಸಿದರು. ವಿಎಚ್‌ಪಿ ಜಿಲ್ಲಾಧ್ಯಕ್ಷ ಪ್ರದೀಪಕುಮಾರ ಪಾಟೀಲ್ ಹೊಸಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಮಮತಾ ವಿಶ್ವಕರ್ಮ ನಿರೂಪಣೆ ಮಾಡಿದರು. ವಿಎಚ್‌ಪಿ ತಾಲೂಕು ಅಧ್ಯಕ್ಷ ಅನೀಲರೆಡ್ಡಿ ಸಂಗೆAಪಲ್ಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net