ಜಾಗೃತ ದೇವರು ಹಲವುಕಲ್ಲೇಶ್ವರ

ydg04
Published on

ಕೊಡೇಕಲ್: ರಾಯನಪಾಳೆ-ದಾಸರಗೋಟ ಗ್ರಾಮದ ಬಳಿ ಇರುವ ಹಲವುಕಲ್ಲು ಹನುಮಪ್ಪನ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಪಲ್ಲಕ್ಕಿ ಉತ್ಸವ ಭಕ್ತರ ಜೈ ಘೋಷಗಳ ನಡುವ ಅದ್ದೂರಿಯಾಗಿ ನಡೆಯಿತು.

ಭಾನುವಾರ ಬೆಳಗ್ಗೆಯಿಂದಲೆ ದೇವಸ್ಥಾನಕ್ಕೆ ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ ತಮ್ಮ ಹರಕೆ ತೀರಿಸಿದರು. ನಂತರ ಸಕಲ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಕಟ್ಟೆಗೆ ತೆರಳಿತು. ಈ ವೇಳೆ ಶ್ರೀ ವೃಷಭೇಂದ್ರ ಅಪ್ಪ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಹಲವುಕಲ್ಲೇಶ್ವರ ಪಲ್ಲಕ್ಕಿ ಉತ್ಸವ ದೇವಸ್ಥಾನ ಆಗಮಿಸಿ ನಂತರ ಅರ್ಚಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗೋಪಾಳವನ್ನು ತುಂಬಿ ಕೃತಾರ್ಥರಾದರು.


ಇದಕ್ಕೂ ಪೂರ್ವ ಶನಿವಾರ ಸಂಜೆ ದೇವರ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಕೃಷ್ಣಾ ನದಿಗೆ ಗಂಗಾಸ್ನಾನಕ್ಕೆ ತೆರಳಿ ಅಹೋರಾತ್ರಿ ಮೆರವಣಿಗೆಯೊಂದಿಗೆ ಪಲ್ಲಕ್ಕಿಯಲ್ಲಿ ವಿರಾಜಿತನಾದ ಹನುಮಪ್ಪನೊಂದಿಗೆ ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ರಾಯನಪಾಳೆ, ದಾಸರಗೋಟ, ಅಮ್ಮಾಪುರ, ಕೊಡೇಕಲ್, ಹನುಮಸಾಗರ, ರಾಜವಾಳ, ತೀರ್ಥ ಸೇರಿ ಹಲವು ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net