ಜಾಗೃತ ಗ್ರಾಹಕರು ಸಮಾಜದ ಪ್ರಗತಿಯ ಮಾನದಂಡ : ಗೀತಾ ಪ್ರಸನ್ನ

Grahaka Panchayath
Published on

ಮೈಸೂರು: ಜಾಗೃತ ಗ್ರಾಹಕರು ಸಮಾಜದ ಪ್ರಗತಿಯ ಮಾನದಂಡ ಎಂಬುದನ್ನು ಎಲ್ಲರು ನೆನಪಿಡಬೇಕು ಎಂದು ಉಪ ಪೊಲೀಸ್ ಆಯುಕ್ತೆ ಗೀತಾ ಪ್ರಸನ್ನ ಹೇಳಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ನಗರದ ವಿದ್ಯಾವರ್ಧಕ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡ ಗ್ರಾಹಕ ಜಾಗೃತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ಪ್ರತಿ ಖರೀದಿಯ ಮೇಲೆ ರಸೀದಿ ಪಡೆಯುವುದನ್ನು ರೂಢಿಸಿಕೊಳ್ಳಬೇಕು. ಈ ಹಿಂದೆ ಕಿರಾಣಿ ಅಂಗಡಿ, ಸೀಮೆಎಣ್ಣೆಯ ಅಳತೆ ವಿಷಯದಲ್ಲಿ ಮಾತ್ರ ಜಾಗೃತರಾಗಿದ್ದ ಜನರು ಇದೀಗ ಪ್ರತಿ ವಿಚಾರದಲ್ಲೂ ಜಾಗೃತರಾಗಿದೆ. ಜಾಗೃತ ಪ್ರಜೆಗಳಿಂದ ಸಮಾಜದ ಪ್ರಗತಿ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರೀಯ ಮಹಿಳಾ ಜಾಗರಣ ಪ್ರಮುಖರಾದ ಆಶಾಸಿಂಗ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಖಜಾಂಚಿ ಶ್ರೀಶೈಲ ರಾಮಣ್ಣ, ಪ್ರಾಂಶುಪಾಲ ದೀಪು, ಪ್ರಾಧ್ಯಾಪಕ ಪ್ರೊ. ಕೆ.ಬಿ. ವಾಸುದೇವ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್‌ರಾಜ್ಯ ಮಹಿಳಾ ಪ್ರಮುಖರಾದ ಗಾಯತ್ರಿ ನಾಡಿಗ್, ಮೈಸೂರು ಘಟಕದ ಅಧ್ಯಕ್ಷ ಡಾ. ಜಿ.ವಿ.ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net