ಜಾಗತಿಕ ಶಾಂತಿಗೆ ಧ್ಯಾನ ಪರಿಣಾಮಕಾರಿ ಸಾಧನ

CTD MEDITEATION DAY------------
Published on

ಚಿತ್ರದುರ್ಗ: ಧ್ಯಾನ ಒಂದು ವೈಯಕ್ತಿಕ ಅನುಭವವಲ್ಲ, ಅದು ಸಮಾಜ ಮತ್ತು ಜಗತ್ತಿನ ಮೇಲೆ ಆಳವಾದ ಪ್ರಭಾವ ಬೀರಬಲ್ಲ ಸಾಮರ್ಥ್ಯ ಹೊಂ ದಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಶ್ಮಿ ಹೇಳಿದರು.

ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಜಿಲ್ಲಾ ಆಯುಷ್ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಹಾಗೂ ಹಾರ್ಟ್‌ಫುಲ್‌ನೆಸ್ ಧ್ಯಾನ ಕೇಂದ್ರದ ಆಶ್ರಯದಲ್ಲಿ ನಗರದ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ವಿಶ್ವ ಧ್ಯಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ಧ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಶಾಂತಿ ಸಾಧಿಸಲು ಧ್ಯಾನ ಒಂದು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಧ್ಯಾನ ದಿನಾಚರಣೆಗೆ ವಿಶ್ವಸಂಸ್ಥೆ ಮನ್ನಣೆ ದೊರೆತಿರುವುದು ಸ್ವಾಗತಾರ್ಹ ಎಂದರು.

ಹಾರ್ಟ್ ಫುಲ್ನೆಸ್ ಧ್ಯಾನ ಕೇಂದ್ರದ ಧ್ಯಾನ ಪ್ರವರ್ತಕ ಸಿದ್ದೇಶ್ ಮಾತನಾಡಿ, ಧ್ಯಾನ ನಮ್ಮೊಳಗಿರುವ ಆಂತರಿಕ ಚೈತನ್ಯವನ್ನು ಜಾಗೃತಗೊಳಿಸುತ್ತದೆ ಎಂದರು.

ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಯೋಗ ಪ್ರಚಾರಕ ರವಿ ಕೆ. ಅಂಬೇಕರ್ ಮಾತನಾಡಿದರು. ಜೆ.ಎನ್. ಕೋಟೆ ಸರ್ಕಾರಿ ಆಯುಷ್ ಚಿಕಿತ್ಸಾಲಯದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ.ಪಿ. ವಿಜಯಲಕ್ಷ್ಮೀ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಶಿಕ್ಷಕ ರಾಮಲಿಂಗಪ್ಪ, ಲಕ್ಷ್ಮೀಬಾಯಿ, ಬಸವರಾಜ್, ರಮೇಶ್, ಮಲ್ಲಿಕಾರ್ಜುನಾಚಾರ್, ವಸಂತಲಕ್ಷ್ಮೀ, ರೇಣುಕಾ, ಮಂಜುಳಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net