ಜಾಂಬಳೆಯಲ್ಲಿ ಆನೆ ಹಾವಳಿ

15kls1 web
Published on

ಕಳಸ: ಹದಿನೈದು ದಿನಗಳ ಹಿಂದೆ ಕಣ್ಮರೆಯಾಗಿದ್ದ ಎರಡು ಕಾಡಾನೆಗಳು ಶನಿವಾರ ಬೆಳಗಿನ ಜಾವ ಸಂಸೆ ಗ್ರಾಮ ಪಂಚಾಯಿತಿ ಜಾಂಬಳೆ ಪ್ರದೇಶದಲ್ಲಿ ಪ್ರತ್ಯಕ್ಷವಾಗಿವೆ. ಹದಿನೈದು ದಿನಗಳ ಹಿಂದೆ ಮಾವಿನಕೆರೆ, ಹಳುವಳ್ಳಿ, ಕೊಂಡದಮನೆ, ಅಬ್ಬುಗುಡಿಕೆ, ಎಸ್.ಕೆ.ಮೇಗಲ್ ಮಂತಾದೆಡೆ ಸಂಚರಿಸಿ ಕೃಷಿ ಭೂಮಿ ನಾಶಪಡಿಸಿ ನಂತರ ಕುದುರೆಮುಖ ಅಭಯಾರಣ್ಯದ ಕಡೆ ತೆರಳಿದ್ದವು. ಇದರಿಂದ ಕೃಷಿಕರು ನಿರಾಳರಾಗಿದ್ದರು.

ಎರಡು ದಿನಗಳ ಹಿಂದೆಯಷ್ಟೇ ಅಭಯಾರಣ್ಯ ವ್ಯಾಪ್ತಿಯ ಬಿಳಗಲ್ ಪ್ರದೇಶದಲ್ಲಿ ಕಂಡುಬಂದ ಆನೆಗಳು ಶನಿವಾರ ಬೆಳಗಿನ ಜಾವ ಜಾಂಬಳೆ ಬಿರೇಕಲ್​ವುಕ್ಕಿ ಸುರೇಶ್ ಅವರ ತೋಟಕ್ಕೆ ನುಗ್ಗಿ ಬಾಳೆ ಗಿಡಗಳನ್ನು ತಿಂದು, ಅಡಕೆ ಸಸಿಗಳನ್ನು ಮುರಿದು ಹಾಕಿವೆ. ಆನೆ ಸಾಗಿದ ದಾರಿಯಲ್ಲಿ ಅಪಾರ ಕಾಫಿ ಗಿಡಗಳು ಕೂಡ ನಾಶವಾಗಿವೆ. ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net