

ಹಾಸನ: ಶಾಲೆ ಮತ್ತು ಕಾಲೇಜಿನಲ್ಲಿ ಅತ್ಯುತ್ತಮ ಅಂಕ ಗಳಿಸಿದವರು ಮತ್ತು ಜಸ್ಟ್ ಪಾಸಾದಂತಹ ವಿದ್ಯಾರ್ಥಿಗಳ ಜೀವನವನ್ನು ಆಧಾರಿಸಿದಂತಹ ಒಂದು ಸುಂದರ ಚಿತ್ರಕಥೆ ಇದೆ ಫೆ. 9ರಂದು ರಾಜ್ಯಾದ್ಯಂತ ‘ಜಸ್ಟ್ ಪಾಸ್ ಚಿತ್ರ ಬಿಡುಗಡೆಯಾಗುತ್ತಿದ್ದು ಇದನ್ನ ಪ್ರೋತ್ಸಾಹಿಸಬೇಕು ಎಂದು ಚಿತ್ರದ ನಾಯಕನಟ ಶ್ರೀ ತಿಳಿಸಿದರು
ದೊಡ್ಡಹಟ್ಟಿ ಬೋರೇಗೌಡ ಖ್ಯಾತಿಯ ಕೆ.ಎಂ.ರಘು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ಜಸ್ಟ್ ಪಾಸ್ ಇದೇ ಶುಕ್ರವಾರ ಫೆ.9ರಂದು ಬಿಡುಗಡೆಯಾಗುತ್ತಿದೆ. ಮೈಸೂರಿನ ಕೆವಿ.ಶಶಿಧರ್ ಅವರು ಈ ಚಿತ್ರವನ್ನು ಅದ್ದೂರಿಯಗಿ ನಿರ್ಮಿಸಿದ್ದಾರೆ. ಡಿಸ್ಟಿಂಕ್ಷನ್ ಬಂದವರಿಗೆ ಸಾಕಷ್ಟು ಕಾಲೇಜುಗಳಿರುತ್ತವೆ.ಜಸ್ಟ್ ಪಾಸ್ ಆಗಿರುವ ಯುವಕ ಯುವತಿಯರ ನಡುವೆ ನಡೆಯುವಂತ ಕಥೆಯಾಗಿದ್ದು, ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಚಿತ್ರದಲ್ಲಿ ಹಿರಿಯ ಕಲಾವಿದರದ ರಂಗಾಯಣ ರಘು, ಸಾಧು ಕೋಕಿಲ, ಕಾಂತರಾ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಸೇರಿದಂತೆ ಹಲವರು ಹಿರಿಯ ಕಲಾವಿದರ ಜೊತೆ ಕಿರಿಯ ಕಲಾವಿದರು ಕೂಡ ಅಭಿನಯಿಸಿದ್ದಾರೆ. ನಾನು ಈ ಹಿಂದೆ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟನೆ ಮಾಡಿದ್ದೆ, ಆದರೆ ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದೇನೆ ಅದೇ ರೀತಿ ಪ್ರಣತಿ ಈ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದಾರೆ ಈ ಚಿತ್ರದ ಹಾಡುಗಳು ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದೆ ಅಲ್ಲದೆ ಕಾಲೇಜಿನ ಕಥೆಯಾಗಿದ್ದು ಕುಟುಂಬ ಸಮೇತ ಆಗಮಿಸಿ ಈ ಚಿತ್ರವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕಿ ಪ್ರಣತಿ ಹಾಗೂ ಸಹ ಕಲಾವಿದರಾದ ಬಿಂದುಶ್ರೀ, ಗಗನ, ಅಭಿಷೇಕ್, ಅರ್ಪಿತ ಹಾಜರಿದ್ದರು.
.