ಜೆಸಿಐ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಜೆಸಿಐ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ
Published on

ಸುಂಟಿಕೊಪ್ಪ: ಕುಶಾಲನಗರದ ಸಿರಿ ಅಂಬಾರಿ ಸಭಾಂಗಣದಲ್ಲಿ ಇತ್ತೀಚೆಗೆ ಜೆಸಿಐ ವಲಯ 14ರ ವತಿಯಿಂದ ಆಯೋಜಿಸಿದ್ದ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ವಿಚಾರ ಸಂಕಿರಣ, ತರಬೇತಿ ಕಾರ್ಯಾಗಾರವನ್ನು ಜೆಸಿಐ ವಲಯ 14ರ ಅಧ್ಯಕ್ಷೆ ಆಶಾ ಜೈನ್ ಉದ್ಘಾಟಿಸಿದರು.

ಜೆಸಿಐ ಪ್ರಮೋದ್ ಕುಮಾರ್, ಕುನಾಲ್ ಮಾನಿಕ್‌ಚಂದ್, ನವೀನ್ ಜೆಸಿಐ ಸಂಸ್ಥೆಯ ಧ್ಯೇಯೋದ್ದೇಶ ಹಾಗೂ ಸಾಮಾಜಿಕ ಸೇವೆ, ನಾಯಕತ್ವ ನಡವಳಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಸುಂಟಿಕೊಪ್ಪ ಜೇಸಿ ಅಧ್ಯಕ್ಷ ಸಂಪತ್ ಕುಮಾರ್, ಕಾರ್ಯಕ್ರಮ ನಿರ್ದೇಶಕ ಜೆಸಿ ಸತೀಶ್, ವಿಕಾಸ್ ಗೂಗ್ಲಿಯ, ನವೀನ್, ಪ್ರಜ್ವಲ್, ನವೀನ್ ಕಾರ್ಯಪ್ಪ, ಯಶಸ್ವಿನಿ, ವಲಯ ಕಾರ್ಯದರ್ಶಿ ಮಾಯಾ, ದೇವಿ ಪ್ರಸಾದ್ ಕಾಯರ್ ಮಾರ್, ಡೆನ್ನಿಸ್ ಡಿಸೋಜ, ಪೆಲ್ಸಿ ಡೆನ್ನಿಸ್, ಜಾಯಿದ್ ಅಹ್ಮದ್, ಮನು ಅಚ್ಚಮ್ಮಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net