

ಕಲಬುರಗಿ: ಲೆಕ್ಕಪರಿಶೋಧಕ (ಸಿಎ) ಕೆಲಸವೂ ಅತ್ಯಂತ ಜವಾಬ್ದಾರಿಯುತ ಮತ್ತು ಜಾಣ್ಮೆಯ ಕೆಲಸವಾಗಿದೆ. ಈ ಹುದ್ದೆಗೇರಲು, ಕೆಲಸ ಮಾಡಲು ಕಠಿಣ ಅಧ್ಯಯನ, ಶ್ರಮ ಇರಬೇಕು ಎಂದು ಸಿಎ ಮಾಣಿಕ ಮಂದಕನಳ್ಳಿ ಹೇಳಿದರು.
ಶ್ರೀ ದಾಮೋದರ ರಘೋಜಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ರ‍್ಪಡಿಸಿದ್ದ ಸಿಎ ದಿನಾಚರಣೆಯಲ್ಲಿ ಮಾತನಾಡಿ, ಲೆಕ್ಕಪರಿಶೋಧಕ ಹುದ್ದೆಯೂ ವಾಣಿಜ್ಯ, ಕೈಗಾರಿಕೆ, ಉದ್ಯಮ ಕ್ಷೇತ್ರದಲ್ಲಿ ಮಹತ್ವದ ಪಾತ್ರ ನರ‍್ವಹಿಸುತ್ತಾರೆ. ಲೆಕ್ಕ ಪತ್ರ ಸರಿ ಇಲ್ಲದಿದ್ದರೆ ಜೀವನವೇ ಸರಿ ಆಗಲ್ಲ. ಆದ್ದರಿಂದ ವಿದ್ಯರ‍್ಥಿಗಳು ಶಿಸ್ತು ಬದ್ಧ ಅಧ್ಯಯನ ಮಾಡಿದರೆ ಭವಿಷ್ಯದಲ್ಲಿ ಅಪಾರ ಅವಕಾಶಗಳು ಈ ಕ್ಷೇತ್ರದಲ್ಲಿ ಇವೆ ಎಂದು ಸಲಹೆ ನೀಡಿದರು.
ಸಿಎ ಚಿನ್ಮಯ ಜನಾದ್ರಿ ಮಾತನಾಡಿ, ಸಿಎ ಅಧ್ಯಯನದಲ್ಲಿ ತೊಡಗಿರುವ ವಿದ್ಯರ‍್ಥಿಗಳು ಸತತ ಅಧ್ಯಯನ, ಶಿಸ್ತು ಮೈಗೂಡಿಸಿಕೊಳ್ಳಬೇಕು. ಲೆಕ್ಕಪರಿಶೋಧನೆಯೂ ಒಂದು ಕುಟುಂಬದ ರ‍್ಥಿಕತೆಯಿಂದ ಇಡೀ ದೇಶದ ರ‍್ಥಿಕತೆಯನ್ನು ರ‍್ನಿಣಯಿಸುತ್ತದೆ. ಜವಾಬ್ದಾರಿ ಅಪಾರ ಇದ್ದು, ಶಿಸ್ತು ಬದ್ಧ ಅಧ್ಯಯನದಲ್ಲಿ ತೊಡಗಿ, ಹೊಸ ಹೊಸ ಪ್ರಯೋಗಗಳೊಂದಿಗೆ ಅಧ್ಯಯನ ಮಾಡಿದರೆ ಭವಿಷ್ಯ ಸುಭದ್ರವಾಗಲಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಶಿವಕುಮಾರ ಎಸ್., ಟ್ರಸ್ಟಿಗಳಾದ ನಂದಿನಿ ರಘೋಜಿ, ವಿಷ್ಣು ಎಂ.ಖೆಲೋಜಿ ಇತರರಿದ್ದರು.