ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ

18HRBD1
ಹಿರೇಬಾಗೇವಾಡಿಯ ಬಸವೇಶ್ವರ ವೃತ್ತದಲ್ಲಿ ಕೆಪಿಸಿಸಿ ಸದಸ್ಯ ಸುರೇಶ ಇಟಗಿ ಅವರನ್ನು ಸನ್ಮಾನಿಸಲಾಯಿತು. ಬಿ.ಜಿ.ವಾಲಿಇಟಗಿ, ಪ್ರಕಾಶ ಕಳಸದ, ಉಳವಪ್ಪ ರೊಟ್ಟಿ, ನಾಗಪ್ಪ ನಂದಿ ಇತರರು ಇದ್ದರು.
Published on

ಹಿರೇಬಾಗೇವಾಡಿ: ಇಲ್ಲಿನ ರಾಷ್ಟ್ರೀಯ ಇಂಗ್ಲಿಷ್ ಮಿಡಿಯಂ ಸ್ಕೂಲ್ ಅಧ್ಯಕ್ಷ, ಗ್ರಾಪಂ ಸದಸ್ಯ ಸುರೇಶ ಬಸಪ್ಪ ಇಟಗಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (ಕೆಪಿಸಿಸಿ) ನೂತನ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಗೆಳೆಯರು, ಹಿರಿಯರು ಹೂಗುಚ್ಛ ನೀಡಿ ಸನ್ಮಾನಿಸಿದರು. ಸುರೇಶ ಇಟಗಿ ಬಸವೇಶ್ವರರ ಅಶ್ವಾರೂಢ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪಕ್ಷ ವಹಿಸಿದ ಜವಾಬ್ದಾರಿಯನ್ನು ದೇವರ ಸೇವೆಯಂತೆ ನಿರ್ವಹಿಸುವುದಾಗಿ ಇಟಗಿ ತಿಳಿಸಿದರು.

ಗ್ರೂಪ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಜಿ.ವಾಲಿಇಟಗಿ, ನಿರ್ದೇಶಕ ಪ್ರಕಾಶ ಕಳಸದ, ಗ್ರಾಪಂ ಸದಸ್ಯರಾದ ಉಳವಪ್ಪ ರೊಟ್ಟಿ, ಸಲೀಂ ಸತ್ತಿಗೇರಿ ಮತ್ತು ಸೈಯದ್ ಸನದಿ, ಗಂಗಪ್ಪ ಇಟಗಿ, ನಾಗಪ್ಪ ನಂದಿ, ಶಿವನಪ್ಪ ನಾಯ್ಕರ, ಜಯರಾಮ ಶೆಟ್ಟಿ, ಚನ್ನಬಸವ ಗಾಣಿಗೇರ, ಆನಂದ ಪಾಟೀಲ, ಶಿವಪುತ್ರ ಹಳೇಮನಿ, ನಾಗನಗೌಡ ಪಾಟೀಲ, ಗಡಿಗೆಪ್ಪ ಗುರುವಣ್ಣವರ, ಮಲ್ಲಪ್ಪ ನಂದಿ, ಮಲ್ಲಿಕಾರ್ಜುನ ಸಪ್ಪಡ್ಲ, ಶ್ರೀಕಾಂತ ಕೊಳವಿ, ಬಸವರಾಜ ಹಟ್ಟಿಹೊಳಿ, ಮಂಜುನಾಥ ಇಟಗಿ ಇದ್ದರು. ಎಐಸಿಸಿ ವರಿಷ್ಠರ ಆದೇಶದ ಮೇರೆಗೆ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಶಿಫಾರಸ್ಸಿನೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬೆಂಗಳೂರಿನಲ್ಲಿ ಸೆ.16ರಂದು ಜರುಗಿದ ಕಾರ್ಯಕ್ರಮದಲ್ಲಿ ಸುರೇಶ ಅವರನ್ನು ಆಯ್ಕೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net