ಜವಾಬ್ದಾರಿ ಅರಿತು ಜೀವನ ರೂಪಿಸಿಕೊಳ್ಳಿ

27KMP 01
Published on

ಕಂಪ್ಲಿ: ನೂರಾರು ಗುಡಿ ಕಟ್ಟುವುದಕ್ಕಿಂತ ಒಂದು ಗ್ರಂಥಾಲಯ ನಿರ್ಮಾಣ ಶ್ರೇಷ್ಠ ಕಾರ್ಯ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಪಟ್ಟಣದ ಐತಿಹಾಸಿಕ ಸೋಮಪ್ಪ ಕೆರೆ ಆವರಣದಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕ ಗ್ರಂಥಾಲಯ ಪಿಇಬಿ ಕಟ್ಟಡ, ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಸೋಮವಾರ ಮಾತನಾಡಿದರು. ವಿದ್ಯಾರ್ಥಿಗಳು ಗ್ರಂಥಾಲಯ ಸದ್ಭಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜವಾಬ್ದಾರಿ ಅರಿತು ಜೀವನ ರೂಪಿಸಿಕೊಳ್ಳಬೇಕು. ಗ್ರಂಥಾಲಯದಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಒದಗಿಸಲಾಗುವುದು ಎಂದರು.

ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ವಾಹನ ಬಳಕೆಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಕುರುಗೋಡು ಪುರಸಭೆ ಅಧ್ಯಕ್ಷ ಶೇಖಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸ್ ರಾವ್, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಪುರಸಭೆ ಸದಸ್ಯ ಸಿ.ಆರ್ .ಹನುಮಂತ, ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಪ್ರಮುಖರಾದ ಎಂ.ಸಿ ಮಾಯಪ್ಪ, ಕೆ.ಮಸ್ತಾನ್ ವಲಿ, ಟಿಎಚ್‌ಒ ಡಾ.ಜಿ.ಅರುಣ್, ಆಡಳಿತ ವೈದ್ಯಾಧಿಕಾರಿ ವೀರೇಶ್, ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಲಕ್ಷ್ಮೀ ಕಿರಣ್, ಜಿಲ್ಲಾ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ನರಸಣ್ಣ, ಸಹಾಯಕ ಗ್ರಂಥಪಾಲಕ ಎಸ್.ಟಿ. ಪ್ರಭಾಕರ, ಗ್ರಂಥಪಾಲಕ ಜಗದೀಶ್, ಕಚೇರಿ ಸಹಾಯಕ ಎಚ್.ಪ್ರಹ್ಲಾದ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net