ಜವಳಿ ಸಚಿವ ಪಾಟೀಲಗೆ ನೇಕಾರರಿಂದ ಅಭಿನಂದನಾ ಸಮಾರಂಭ

bkt-15-1 (1)
ಬಾಗಲಕೋಟೆ ಕಲಾಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ನೇಕಾರರ ಅಭಿವೃದ್ಧಿ ಹಲವು ಯೋಜನೆ ಜಾರಿಗೊಳಿಸಿದ ಹಿನ್ನಲೆ ಜವಳಿ ಶಿವಾನಂದ ಪಾಟೀಲ ದಂಪತಿಯನ್ನು ಸನ್ಮಾನಿಸಿದರು.
Published on

ಬಾಗಲಕೋಟೆ: ರಾಜ್ಯ ಸರ್ಕಾರ ನೇಕಾರರಿಗೆ ಅಭಿವೃದ್ಧಿಗಾಗಿ ೧೦ ಎಚ್ಪಿ ವರೆಗೂ ಉಚಿತ ವಿದ್ಯುತ್ ಸೇರಿ ಹಲವಾರು ಉಪಯುಕ್ತ ಯೋಜನೆಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಶುಕ್ರವಾರ ಬಾಗಲಕೋಟೆಯಲ್ಲಿ ನೇಕಾರರು ರಾಜ್ಯ ಜವಳಿ ಸಚಿವ ಶಿವಾನಂದ ಪಾಟೀಲ ಅವರಿಗೆ ಅಭಿನಂದನಾ ಸಮಾರಂಭ ನಡೆಸಿದರು.

ನಗರದ ಕಲಾಭದಲ್ಲಿ ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ಹಾಗೂ ಬಾಗಲಕೋಟೆ ಜಿಲ್ಲಾ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾವಿರಾರು ನೇಕಾರರ ಸಮ್ಮುಖದಲ್ಲಿ ಸಚಿವ ಶಿವಾನಂದ ಪಾಟೀಲ ದಂಪತಿಯನ್ನು ಸನ್ಮಾನಿಸಿದರು. ಸಚಿವ ಶಿವಾನಂದ ಅವರಿಗೆ ಶಾಲು ಹಾಗೂ ಅವರ ಧರ್ಮಪತ್ನಿ ಭಾಗ್ಯಶ್ರೀ ಅವರಿಗೆ ಸುಪ್ರಸಿದ್ದ ಇಳಕಲ್ಲ ಸೀರೆ ಹೊದಿಸಿ, ಚರಕ ನೀಡಿ ಗೌರವಿಸಿದರು.

ನೇಕಾರ ಸಮುದಾಯದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜವಳಿ ಸಚಿವ ಶಿವಾನಂದ ಪಾಟೀಲ, ನೇಕಾರ ಮುಖಂಡರು ಸಲ್ಲಿಸಿದ ಬೇಡಿಕೆಯಂತೆ ಕೈ ಮಗ್ಗ, ಹ್ಯಾಂಡಲೋಮ್‌ನಲ್ಲಿ ತಯಾರಿಸಿದ ನೇಕಾರರ ಉತ್ಪನ್ನಗಳನ್ನು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ನೌಕರರಿಗೆ ಬಳಕೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಅಭಯ ನೀಡಿದರು.

ದಿ. ರಾಮಕೃಷ್ಣ ಹೆಗಡೆ ಅವರು ಸಿಎಂ ಇದ್ದಾಗ ನೇಕಾರರಿಗಾಗಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಿದರು. ಬಳಿಕ ಬಂದ ಸರ್ಕಾರಗಳು ಸಹ ಒಂದೊಂದು ರೀತಿಯಲ್ಲಿ ಸಹಾಯ ಮಾಡುತ್ತ ಬಂದಿದೆ. ಮುಖ್ಯವಾಗಿ ಸಿದ್ದರಾಮಯ್ಯ ಅವರು ೨೦೧೩-೧೮ರ ಅವಽಯಲ್ಲಿ ಸಿಎಂ ಇದ್ದಾಗ ಎರಡು ಬಾರಿ ಸಾಲ ಮನ್ನಾ ಮಾಡಿದರು. ಈ ಸಾರಿ ೧೦ ಎಚ್.ಪಿ ವರೆಗೆ ಉಚಿತವಾಗಿ ವಿದ್ಯುತ್ ಉಚಿತವಾಗಿ ನೀಡಿದ್ದೇವೆ. ೨೦ ಎಚ್.ಪಿ ವರೆಗೆ ಹೆಚ್ಚಿಸಲು ಬೇಡಿಕೆ ಇದೆ. ಈ ಬಗ್ಗೆ ಗಮನ ಹರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನೇಕಾರ ಮುಖಂಡರು ಸಲ್ಲಿಸಿದ ಬೇಡಿಕೆಯಂತೆ ರಾಜ್ಯದಲ್ಲಿ ಘೋಷಿತಗೊಂಡು ಅನುಷ್ಠಾನ ವಿಳಂಭವಾಗಿರುವ ನೇಕಾರ ಸಮುದಾಯ(ಜಾತಿ) ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸುವುದು, ಅನುಷ್ಠಾನಗೊಳಿಸುವ ಬಗ್ಗೆ ನೇಕಾರರಿಗೂ ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕಾರ್ಮಿಕ ಸಚಿವರ ಜೊತೆ ಚರ್ಚಿಸಲಾಗಿದೆ. ಸಹ ಸಚಿವ ಶಿವಾನಂದ ಪಾಟೀಲ ಸಕರಾತ್ಮಕವಾಗಿ ಸ್ಪಂದಿಸಿದರು.
ನೇಕಾರರಿಗೆ ಕಚ್ಚಾಮಾಲು ಒದಗಿಸಲು ವಿಶೇಷ ಯೋಜನೆ ರೂಪಿಸಲಾಗುವುದು, ಬೆಂಗಳೂರಲ್ಲಿ ನೇಕಾರರ ಬೃಹತ್ ಸಮಾವೇಶ ನಡೆಸಿ ನೇಕಾರರ ಬೇಡಿಕೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಸರ್ಕಾರ ಎಷ್ಟೇ ಯೋಜನೆ ನೀಡಿದರೂ ಸಹ ನೇಕಾರರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ, ಉಪಾಧ್ಯಕ್ಷ ರವೀಂದ್ರ ಕಲಬುರಗಿ, ಜಿಲ್ಲಾ ಅಧ್ಯಕ್ಷ ಚಂದ್ರಕಾಂತ ಶೇಖಾ, ವಿ.ವಿ.ಶಿರಗಣ್ಣವರ, ಮನೋಹರ ರಕ್ಕಸಗಿ, ರಮೇಶ್ ಜಮಖಂಡಿ, ವಿಷ್ಣು ಗೌಡರ, ಜವಳಿ ಇಲಾಖೆ ಆಯುಕ್ತ ಪಿ.ಎಂ.ಶ್ರೀಧರ, ಇಲಾಖೆ ಜಿಲ್ಲಾ ಅಽಕಾರಿ ಎಂ.ಜಿ.ಕೊಣ್ಣೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net