ಜವಳಿ ಪಾರ್ಕ್ಗೆ ಗುರುತಿಸಿರುವ ಜಾಗ ತಡೆಗೆ ಡಿಎಸ್‌ಎಸ್ ಒತ್ತಾಯ

28 ckm 1
ಚಿಕ್ಕಮಗಳೂರು ಎಡಿಸಿ ನಾರಾಯಣ ರಡ್ಡಿಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದ ಡಿಎಸ್‌ಎಸ್ ಕಾರ್ಯಕರ್ತರು ತಾಲೂಕಿನಲ್ಲಿ ಸರ್ಕಾರ ಜವಳಿ ಪಾರ್ಕ್ ಯೋಜನೆಗೆ ಗುರುತಿಸಿರುವ ಜಾಗವನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು. ಮರ್ಲೆ ಅಣ್ಣಯ್ಯ, ಮಂಜಯ್ಯ, ಯು.ಬಿ.ರಮೇಶ್, ಸೋಮಶೇಖರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಲೂಕಿನಲ್ಲಿ ಸರ್ಕಾರ ಜವಳಿ ಪಾರ್ಕ್ ಯೋಜನೆಗೆ ಗುರುತಿಸಿರುವ ಜಾಗವನ್ನು ತಡೆಹಿಡಿಯಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಕಂದಾಯ ಇಲಾಖೆ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಅಪರ ಜಿಲ್ಲಾಧಿಕಾರಿ ನಾರಾಯಣಕನಕರಡ್ಡಿ ಮುಖಾಂತರ ಸೋಮವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ತಾಲೂಕಿನ ಲಕ್ಯಾ ಹೋಬಳಿಯ ಹಿರೇಗೌಜ ಗ್ರಾಮದ ಸರ್ವೆ ನಂ.೧೧೧ ರಲ್ಲಿ ಜವಳಿ ಪಾರ್ಕ್ಗೆ ೧೫ ಎಕರೆ ಜಾಗವನ್ನು ನಿಗಧಿಪಡಿಸಿ ಆದೇಶಿಸಿರುವುದು ಸರಿ. ಆದರೆ ಆ ಜಾಗದಲ್ಲಿ ಹಿರೇಗೌಜದ ಸುತ್ತಮುತ್ತಲಿನ ದಲಿತ ಕುಟುಂಬಗಳು ಮೂರು ದಶಕಗಳಿಂದ ಭೂಸಾಗುವಳಿ ಮಾಡಿಕೊಂಡಿವೆ ಎಂದರು.

ದಲಿತರನ್ನು ಭೂಮಿಯಿಂದ ವಂಚಿತರನ್ನಾಗಿ ಮಾಡುವ ಉz್ದೆÃಶದಿಂದ ಕೆಲವು ಕಾಣದ ಕೈಗಳು ಸಂಚು ರೂಪಿಸಿ ಆ ಸ್ಥಳವನ್ನೇ ಗುರುತು ಮಾಡಿದೆ. ಜವಳಿ ಪಾರ್ಕ್ ನಿರ್ಮಾಣಗೊಂಡರೆ ಉದ್ಯೋಗ ಸಿಗಲಿದೆ ಎಂಬ ಸುಳ್ಳು ವದಂತಿ ಹಬ್ಬಿಸಿ ದಲಿತರ ಭೂಮಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ಆ ಪ್ರದೇಶದ ಸುತ್ತಮುತ್ತಲಿನಲ್ಲಿ ಅನೇಕ ಸರ್ಕಾರಿ ಸ್ವೌಮ್ಯದ ಜಾಗವಿದೆ. ಆದರೂ ಅವುಗಳನ್ನು ಗುರುತಿಸದೇ, ಭೂಮಿಯನ್ನೇ ನಂಬಿಕೊAಡ ಬದುಕು ಸಾಗಿಸುತ್ತಿರುವ ದಲಿತರ ಕುಟುಂಬಗಳ ಭೂಮಿ ಕಿತ್ತುಕೊಳ್ಳುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ದೂರಿದರು.

ಕೂಡಲೇ ಸರ್ಕಾರ ಹಿರೇಗೌಜ ಗ್ರಾಮದ ಜಾಗದಲ್ಲಿ ನಿರ್ಮಿಸುತ್ತಿರುವ ಜವಳಿ ಪಾರ್ಕ್ ಯೋಜನೆಯನ್ನು ತಡೆಹಿಡಿಯಬೇಕು. ಒಂದುವೇಳೆ ದಲಿತರ ಭೂಮಿ ಕಬಳಿಸಲು ಯತ್ನಿಸಿದರೆ ಡಿಎಸ್‌ಎಸ್ ರೈತರೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಮಂಜಯ್ಯ, ಯು.ಬಿ.ರಮೇಶ್, ಮುಖಂಡರಾದ ಆರ್.ಶೇಖರ್, ಸೋಮಶೇಖರ್, ಎನ್.ಆರ್.ಪುರ ಶಿವಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net