ಜವನಗೊಂಡಹಳ್ಳಿ ಪಿಡಿಒ ಸಸ್ಪೆಂಡ್

Suspended
Published on

ಚಿತ್ರದುರ್ಗ:ಹಣಕಾಸು ವ್ಯವಹಾರ ಲೆಕ್ಕ ಒದಗಿಸದೆ ಕರ್ತವ್ಯ ಲೋಪ ತೋರಿರುವ ಹಿರಿಯೂರು ತಾಲೂಕು ಜವನಗೊಂಡನಹಳ್ಳಿ ಗ್ರಾಪಂ ಪಿಡಿಒ ಸಿ.ಈಶ್ವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ. ಗ್ರಾ ಪಂಗೆ ಸಂಬಂಧಿಸಿದ 15ನೇ ಹಣಕಾಸು ಅನುದಾನದ ಖರ್ಚು ವೆಚ್ಚದ ಮಾಹಿತಿಯನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ನೀಡದೆ ಉ ದ್ಧಟತನ ತೋರುವುದರ ಜತೆಗೆ, ಜಿಪಂ ಮುಖ್ಯಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ನೇಮಿಸಿದ ತನಿಖಾ ತಂಡಕ್ಕೆ ಆಡಿಟ್ ನಡೆಸಲು ಸೂಕ್ತ ದಾ ಖಲೆಗಳನ್ನು ನೀಡದೆ ಈಶ್ವರ್ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆಂದು ಸಿಇಒ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net