ಜೀವ ಉಳಿಸುವ ಅವಕಾಶ ಬಳಸಿಕೊಳ್ಳಿ

25SPT2
Published on
  • ಮಡಿಕೇರಿಯ: ಸೋಮವಾರಪೇಟೆಯ ಜಿಲ್ಲಾ ರಕ್ತನಿಧಿ ಕೇಂದ್ರ ಹಾಗೂ ಶ್ರೀ ಸಾಯಿ ಆಸ್ಪತ್ರೆಯಿಂದ ಕಕ್ಕೆಹೊಳೆ ಜಂಕ್ಷನ್‌ನಲ್ಲಿರುವ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಗುರುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

  • ಶಿಬಿರಕ್ಕೆ ಸುಳ್ಯದ ಸಮಾಜ ಸೇವಕಿ ನೇತ್ರಾವತಿ ಪಡಂಬೈಲ್ ಚಾಲನೆ ನೀಡಿದರು. ನಂತರ ಮಾತನಾಡಿ, ರಕ್ತದಾನ ಮಾಡುವುದು ಉತ್ತಮ ಕಾರ್ಯವಾಗಿದೆ. ಮತ್ತೊಂದು ಜೀವ ಉಳಿಸಲು ಆರೋಗ್ಯವಂತರು ಮುಂದಾಗಬೇಕು. ನಮಗೆ ಮತ್ತೊಬ್ಬರ ಜೀವ ಉಳಿಸಲು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

  • ರಕ್ತನಿಧಿ ಕೇಂದ್ರದ ವೈದ್ಯರಾದ ಕರುಂಬಯ್ಯ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಕೊರತೆಯಿದ್ದು, ಸಾಕಷ್ಟು ರಕ್ತದಾನ ಶಿಬಿರಗಳನ್ನು ನಡೆಸಿದಲ್ಲಿ ಕೊರತೆಯನ್ನು ನೀಗಿಸಬಹುದು. ಸಂಘ ಸಂಸ್ಥೆಗಳು ತಮ್ಮ ವಾರ್ಷಿಕ ಕಾರ್ಯಕ್ರಮಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲು ಮುಂದಾಗಬೇಕು. ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಲು ಅವಕಾಶ ಇದ್ದು, ಇದರಿಂದ ಮತ್ತೊಂದು ಜೀವ ಉಳಿಸುವುದರೊಂದಿಗೆ, ದಾನಿಗಳು ಆರೋಗ್ಯವಂತರಾಗಿ ಜೀವನ ಸಾಗಿಸಬಹುದು ಎಂದರು.

  • ಆಸ್ಪತ್ರೆಯ ವೈದ್ಯರಾದ ಹಿಮಾನಿ, ಬಾಲಸುಂದರ್, ಮಲ್ಲಿಕಾರ್ಜುನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net