ಜಲ್ ಜೀವನ್ ನಿಗದಿಯಲ್ಲಿ ಪೂರ್ಣಗೊಳಿಸಿ

12 hbd 02
Published on

ಚಿಟಗುಪ್ಪ: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಜಲ ಜೀವನ್ ಮಿಷನ್ ಕಾಮಗಾರಿ ಗುಣಮಟ್ಟದ ಜತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೇಮಳಖೇಡದಲ್ಲಿ ಮಂಗಳವಾರ ಜೆಜೆಎಂ ಕಾಮಗಾರಿಗೆ ಚಾಲನೆ ಹಾಗೂ ಪರಿಹಾರ ಧನದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಪರದಾಟ ತಪ್ಪಿಸಲು ಜೆಜೆಎಂ ಜಾರಿ ಮಾಡಲಾಗಿದೆ. ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಯೋಜನೆ ಅನುಷ್ಠಾನವಾಗಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಬೇಮಳಖೇಡದಲ್ಲಿ ಸುಮಾರು ೧,೭೦೦ ಮನೆಗೆ ಶುದ್ಧ ಕುಡಿಯುವ ನೀರು ದೊರಕಲಿದೆ ಎಂದರು.

ಬೇಮಳಖೇಡ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮನೆ ಕಳೆದುಕೊಂಡ ೩೧ ಕುಟುಂಬದ ಸಂತ್ರಸ್ತರಿಗೆ ಪರಿಹಾರ ಹಣ ಸಂದಾಯ ತಿಳುವಳಿಕೆ ಪತ್ರ ನೀಡಿದರು.
ತಹಸೀಲ್ದಾರ್ ರವೀಂದ್ರ ದಾಮಾ, ಉಪ ತಹಸೀಲ್ದಾರ್ ನಸೀರ್, ಎಇಇ ಶಾಮಸುಂದರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ, ಪಿಡಿಒ ಸುಶಾಂತಕುಮಾರ, ಮಹೇಶ, ಗ್ರಾಮಲೆಕ್ಕಿಗ ನಿಂಗಪ್ಪ, ರಾಜರೆಡ್ಡಿ ಶಹಾಬಾದ್, ಬಸವರಾಜ ಚಿಟನಳ್ಳಿ, ಅನೀಲಕುಮಾರ ಭಂಗೂರ, ವಿಜಯಕುಮಾರ ರಾಜಗೀರಾ, ಸುರೇಶ ಮಾಶೆಟ್ಟಿ, ಘಾಳೆಪ್ಪ ಚಟ್ಟನಳ್ಳಿ, ಜಗನ್ನಾಥ ಪಾಟೀಲ್, ಬಸವರಾಜ ಯದ¯್ಲÁಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net