

ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಪ್ರಭಾರ ಸಿಇ ಎಲ್.ಬಸವರಾಜ ತಿಳಿಸಿದ್ದಾರೆ.
ಜಲಾಶಯದ ಕೆಳ ಭಾಗದಲ್ಲಿ ಮಳೆ ಕೊರತೆ ಕಾರಣ ನದಿ ಅವಲಂಬಿತ ಜನ, ಜಾನುವಾರುಗಳಿಗೆ ಕುಡಿವ ನೀರಿನ ಅಭಾವವಾಗುತ್ತಿದೆ. ಹೀಗಾಗಿ ಕಾಲುವೆ ಮೂಲಕ 0.5ಟಿಎಂಸಿ ಅಡಿ ನೀರು ನದಿಗೆ ಹರಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಸೂಚಿಸಿದ್ದಾರೆ. ಆ.10ರಿಂದ 0.5ಟಿಎಂಸಿ ಅಡಿ ನೀರು ನದಿಗೆ ಬಿಡಲಾಗುವುದು. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು. ನದಿಯಲ್ಲಿ ಓಡಾಡುವುದು, ಜಾನುವಾರು ಬಿಡದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.