

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ವಿದ್ಯಾಗಿರಿ ಜೆಎಸ್ಎಸ್ ಆವರಣದಲ್ಲಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಮಾ. 6, 7ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 6ರಂದು ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ರಾಷ್ಟ್ರ ಧ್ವಜಾರೋಹಣ, ವೆಂಕಟೇಶ ಮಾಚಕನೂರ ಕನ್ನಡ ಧ್ವಜಾರೋಹಣ ಹಾಗೂ ಡಾ. ಲಿಂಗರಾಜ ಅಂಗಡಿ ಪರಿಷತ್ ಧ್ವಜಾರೋಹಣ ನೆರವೇರಿಸುವರು. ಬಳಿಕ 9.30ಕ್ಕೆ ಕನ್ನಡಕ್ಕಾಗಿ ನಡಿಗೆ ಏರ್ಪಡಿಸಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಚಾಲನೆ ನೀಡಲಿದ್ದಾರೆ ಎಂದರು.
ಬೆಳಗ್ಗೆ 10.30ಕ್ಕೆ ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಸಮ್ಮೇಳನಕ್ಕೆ ಚಾಲನೆ ನೀಡುವರು. ಸಮ್ಮೇಳನಾಧ್ಯಕ್ಷ ಡಾ. ಕೆ.ಎಸ್. ಶರ್ಮಾ, ನಿಕಟಪೂರ್ವ ಅಧ್ಯಕ್ಷ ಪ್ರೊ. ಧರಣೇಂದ್ರ ಕುರಕುರಿ, ಡಾ. ಶಾಂತಿನಾಥ ದಿಬ್ಬದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜೆಎಸ್ಎಸ್ ಕಾರ್ಯದಶಿರ್ ಡಾ. ಅಜಿತ ಪ್ರಸಾದ, ಶಾಸಕರು, ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಧ್ಯಾಹ್ನ 2 ಗಂಟೆಗೆ ಸಾಹಿತ್ಯ ಚಿಂತನೆ, 3.30ಕ್ಕೆ ಬೇಂದ್ರೆ ಸಾಹಿತ್ಯದ ಒಳನೋಟಗಳು, ಸಂಜೆ 5 ಗಂಟೆಗೆ ಇಂದಿನ ಯುವಕರ ಹವ್ಯಾಸಗಳು&ವ್ಯಕ್ತಿತ್ವ ವಿಷಯಗಳ ಕುರಿತ ಗೋಷ್ಠಿಗಳು ನಡೆಯಲಿದ್ದು, ಡಾ. ಅರವಿಂದ ಯಾಳಗಿ, ಡಾ. ವೈ.ಎಂ. ಭಜಂತ್ರಿ, ಡಾ. ಕೆ.ಆರ್. ದುರ್ಗಾದಾಸ, ಸುರೇಶ ಕುಲಕಣಿರ್, ಡಾ. ಆನಂದ ಪಾಂಡುರಂಗಿ ಸೇರಿ ಇತರರು ವಿಷಯ ಮಂಡಿಸಲಿದ್ದಾರೆ. ಸಂಜೆ 6.30ಕ್ಕೆ ಸಾಂಸತಿಕ ಕಾರ್ಯಕ್ರಮ ನಡೆಯಲಿದ್ದು, ವಿಶ್ವೇಶ್ವರಿ ಹಿರೇಮಠ ಉದ್ಘಾಟಿಸುವರು.
ಮಾ. 7ರಂದು ಬೆಳಗ್ಗೆ 10 ಗಂಟೆಗೆ ಮಹಿಳಾ ಸಂವೇದನೆ ಗೋಷ್ಠಿಯಲ್ಲಿ ಡಾ. ವಿನಯಾ ಒಕ್ಕುಂದ, ಡಾ. ವೀಣಾ ಯಲಿಗಾರ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಾನವ ಹಕ್ಕುಗಳು ಮತ್ತು ಸಂವಿಧಾನ ಗೋಷ್ಠಿಯಲ್ಲಿ ಸುರೇಶ ಒಂಟಗೋಡಿ ಉಪನ್ಯಾಸ ನೀಡುವರು. 2.30ಕ್ಕೆ ಮರೆಯಲಾಗದ ಕವಿಗಳ ನೆನಪು, 3.30ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ಹಾಗೂ ಸಂಜೆ 4.30ಕ್ಕೆ ಬಹಿರಂಗ ಸಭೆ ಏರ್ಪಡಿಸಲಾಗಿದೆ ಎಂದರು.
ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ. ಸಿದ್ದನಗೌಡ ಪಾಟೀಲ ಸಮಾರೋಪ ನುಡಿಗಳನ್ನಾಡುವರು. ಪ್ರೊ. ಸಿ. ಬಸವರಾಜು ಅಧ್ಯಕ್ಷತೆ ವಹಿಸುವರು. ಡಾ. ಶಶಿಧರ ತೋಡಕರ, ಶಂಕರಣ್ಣ ಮುನವಳ್ಳಿ, ಸುರೇಶ ಬೇದರೆ, ಡಾ. ರಾಮೇಗೌಡ ಎಂ., ಕವಿತಾ ಕಬ್ಬೇರ, ಕೆ.ಪಿ. ಸುರೇಶ, ಡಾ. ಸೋಮಶೇಖರ ಹುದ್ದಾರ, ಇತರರು ಪಾಲ್ಗೊಳ್ಳಲಿದ್ದಾರೆ. ನಂತರ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಚಂದ್ರಕಾಂತ ಬೆಲ್ಲದ, ಪ್ರೊ. ಕೆ.ಎಸ್. ಕೌಜಲಗಿ, ಮಾರ್ತಾಂಡಪ್ಪ ಕತ್ತಿ, ಡಾ. ಜಿನದತ್ತ ಹಡಗಲಿ, ಇತರರು ಇದ್ದರು.