ಜಲಮೂಲಗಳ ರಕ್ಷಣೆ ಎಲ್ಲರ ಕರ್ತವ್ಯ

22 kpp 1 web
Published on

ಕೊಪ್ಪ: ಗ್ರಾಮದ ಏಳಿಗೆ, ಜನರ ಅನುಕೂಲಕ್ಕಾಗಿ ಪೂರ್ವಜರು ಕೊಟ್ಟಿರುವ ಜಲಮೂಲ ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಹುಚ್ಚುರಾಯರ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಹುಚ್ಚುರಾಯರು ದೂರದೃಷ್ಟಿಯಿಂದ ಕೆರೆಯನ್ನು ಪಟ್ಟಣ ಪಂಚಾಯಿತಿಗೆ ದಾನ ನೀಡಿದ ಸಲುವಾಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹುಚ್ಚುರಾಯರ ಕೆರೆ ಅಭಿವೃದ್ಧಿಗೆ ಅನುದಾನ ಇರಿಸಲಾಗಿದೆ. ಕೆರೆ ಏರಿ ಚಿಕ್ಕದಾಗಿರುವದರಿಂದ ಇನ್ನೂ ಎತ್ತರಗೊಳಿಸಲಾಗುವುದು ಎಂದು ತಿಳಿಸಿದರು. ಕೆರೆಗೆ ದಾನ ನೀಡಿದ ಹುಚ್ಚುರಾಯರ ಕುಟುಂಬಸ್ಥರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net