

ಬೆಳಗಾವಿ:ಗೋಕಾಕ ಜಲಪಾತ ವೀಕ್ಷಿಸಲು ಹೋಗಿ ಮೇಲಿನಿಂದ ಜೀಗಿದು ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುರೇಶ ಪತ್ತಾರ ಎಂಬವರೇ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಈತ ಕೆಲ ದಿನಗಳಿಂದ ರಕ್ತ ಹೀನತೆಯಿಂದ ಬಳಲುತ್ತಿದ್ದ. ಕಳೆದ ಸೋಮವಾರ ಮನೆಯಿಂದ ಯಾರಿಗೂ ಹೇಳದೆ ಹೊರಟು ಹೋಗಿದ್ದ ಎಂದು ಕುಟುಂಬದ ವಾರಸುದಾರರು ಮೂಡಲಗಿ ಠಾಣೆಗೆ ದೂರು ನೀಡಿ, ಕಳೆದ 2-3 ದಿನಗಳಿಂದ ಸುರೇಶ ಪತ್ತಾರ ಕಾಣಿಸುತ್ತಿಲ್ಲ. ಹುಡುಕಿಕೊಡಿ ಎಂದು ಪ್ರಕರಣ ದಾಖಲಿಸಿದ್ದರು. ಬುಧವಾರ ಸಂಜೆ ಈತ ಆತ್ಮಹತ್ಯೆ ಮಾಡಿಕೊಂಡಿದ್ದು, ಶವವನ್ನು ಪತ್ತೆ ಹಚ್ಚಿ ರಾತ್ರಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದು ಗೋಕಾಕ ಪೊಲೀಸರು ತಿಳಿಸಿದ್ದಾರೆ.