

ರಾಮನಗರ: ನೆಲಮಂಗಲದಲ್ಲಿ ಹಮ್ಮಿಕೊಂಡಿರುವ ಜನತಾ ಜಲಧಾರೆ ಗಂಗಾರತಿ ಕಾರ್ಯಕ್ರಮಕ್ಕೂ ಮುನ್ನ ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಪೂಜೆ ಸಲ್ಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಧಾರೆ ಕಾರ್ಯಕ್ರಮದಿಂದಾಗಿ ಜೆಡಿಎಸ್ ಪಕ್ಕೆ ಅನುಕೂಲವಾಗಿದೆ. ಕಾರ್ಯಕ್ರಮ ಪಕ್ಕೆ ಪುನಶ್ಚೇತನ ಅಷ್ಟೇ ಅಲ್ಲ, ರಾಜ್ಯದಲ್ಲಿನ ಜೀವನದಿಗಳ ನೀರನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದಾಗಿ ನಾಡಿನ ಮೂಲೆ ಮೂಲೆಗೂ ಕಾರ್ಯಕ್ರಮವನ್ನು ತೆಗೆದುಕೊಂಡು ಹೋಗಿದ್ದೇವೆ. ರಾಜ್ಯದ ಸಮಗ್ರ ನೀರಾವರಿ ಯೋಜನೆ ಬಗ್ಗೆ ಜನರ ಮುಂದಿಟ್ಟಿದ್ದೇವೆ ಎಂದು ಹೇಳಿದರು.
ಜನತಾ ಜಲಧಾರೆ ಮೂಲ ಉದ್ದೇಶ ನೀರಾವರಿಯ ಸದ್ಬಳಕೆ ಮಾಡಿಕೊಳ್ಳಬೇಕೆಂಬುದಾಗಿದೆ. ನೀರಾವರಿ ಯೋಜನೆಗಳಿಗೆ ಎರಡು ರಾಷ್ಟ್ರೀಯ ಪಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ನಮ್ಮ ರಾಜ್ಯಕ್ಕೆ ಹೆಚ್ಚು ದ್ರೋಹ ಆಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪ ಅಧಿ-ಕಾರಕ್ಕೆ ಬಂದರೆ, ಸಮಗ್ರ ನೀರಾವರಿ ಅನುಷ್ಠಾನ ಮಾಡಲಾಗುತ್ತದೆ. ಇಲ್ಲದಿದ್ದರೇ ಪ ವಿಸರ್ಜನೆ ಮಾಡುವ ಸವಾಲು ನನ್ನ ಮುಂದಿದೆ. ತಾಯಿಯ ಆರ್ಶೀರ್ವಾದಿಂದ ನೂರಕ್ಕೆ ನೂರು ಯಶಸ್ಸು ಗಳಿಸುತ್ತೇನೆ. ಆತ್ಮವಿಶ್ವಾಸ ಹಾಗೂ ನಂಬಿಕೆಯಿಂದ ಈ ಹೋರಾಟಕ್ಕೆ ಧುಮುಕಿದ್ದೇನೆ ಎಂದು ಹೇಳಿದರು.
ನದಿಯ ನೀರು ಬಳಕೆ ಮಾಡಿಕೊಳ್ಳಲು ನಮ್ಮ ವಿಲತೆ ಎದ್ದು ಕಾಣುತ್ತಿದೆ. ನೀರನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುದನ್ನು ಜನತೆಗೆ ತಿಳಿಸಿದ್ದೇವೆ. ಹಾಗಾಗಿ ಜನತಾ ಜಲಧಾರೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಜಲಧಾರೆ ಉತ್ತಮವಾದ ಕಾರ್ಯಕ್ರಮ, ಕುಮಾರಸ್ವಾಮಿ ಅವರನ್ನು ಆಶೀರ್ವದಿಸೋಣ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ ಎಂದು ತಿಳಿಸಿದರು.
ಜೆಡಿಎಸ್ ಪ ಮುಳುಗೇಹೋಯ್ತು, ಚೇತರಿಸಿಕೊಳ್ಳಲ್ಲ ಎಂದು ವಿರೋಧ ಪಗಳ ಅಪಪ್ರಚಾರಕ್ಕೆ ಜನತಾ ಜಲಧಾರೆ ಉತ್ತರ ನೀಡಿದೆ. ಜಲಧಾರೆಯಿಂದ ಪದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದ್ದು, ಕಾರ್ಯಕರ್ತರು ಡಬಲ್ ಎನರ್ಜಿಯಿಂದ ಹೊರಟಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪದಲ್ಲಿನ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಜನತಾ ಜಲಧಾರೆ ಸಭೆ ಬಳಿಕ ಎಲ್ಲ ಗೊಂದಲಗಳು ಸರಿಯಾಗಲಿವೆ. ನಮ್ಮಂತೆಯೇ ಎಲ್ಲ ಪಗಳಲ್ಲೂ ಸಮಸ್ಯೆಗಳು ಇವೆ. ಈಗ ಕಾಂಗ್ರೆಸ್ ಹೊತ್ತಿ ಉರಿಯುತ್ತಿಲ್ಲವೇ ಎಂದು ಪ್ರಶ್ನಿಸಿದ ಎಚ್ಡಿಕೆ, ಅಷ್ಟೊಂದು ದೊಡ್ಡಮಟ್ಟದ ಸಮಸ್ಯೆ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಜನತೆಯ ಆರ್ಶೀವಾದ: 123ರ ಗುರಿ ಹೇಳಿದಾಗ ಬಹಳ ಜನ ಕೇವಲವಾಗಿ ಮಾತನಾಡಿದ್ದಾರೆ. ರೆತರ ಸಾಲ ಮನ್ನಾ ಮಾಡುತ್ತೇನೆ ಎಂದಾಗಲೂ ಮಾತನಾಡಿದ್ದರು. ರೆತರ ಸಾಲ ಮನ್ನಾ ಮಾಡುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಈ ಬಾರಿ 123ರ ಗುರಿ ಇಟ್ಟಿದ್ದೇನೆ, ರಾಜ್ಯದ ಜನರ ಸಂಪೂರ್ಣ ಆಶೀರ್ವಾದದೊಂದಿಗೆ ಕನ್ನಡತನ ಇರುವ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಇಂತಹ ಸರ್ಕಾರ ಪ್ರತಿಷ್ಠಾಪನೆಯಾಗಲು ನಾಡಿನ ಜನತೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಸ್ಥಳಿಯ ಜೆಡಿಎಸ್ ಮುಖಂಡರಾದ ರಾಜಶೇಖರ್, ಜಿ.ಟಿ. ಕಷ್ಣ, ಜಯಕುಮಾರ್, ಹೋಟೆಲ್ ಉಮೇಶ್, ಮುಂತಾದವರು ಇದ್ದರು.
ನೆಲಮಂಗಲದ ಬಳಿ ನಡೆಯುತ್ತಿರುವ ಜನತಾ ಜಲಧಾರೆ ಬಹತ್ ಸಮಾವೇಶಕ್ಕೆ ಜಿಲ್ಲೆಯಿಂದಲೂ ಸುಮಾರು 350ಕ್ಕೂ ಬಸ್ಗಳಲ್ಲಿ ಜೆಡಿಎಸ್ ಕಾರ್ಯಕರ್ತರು ತೆರಳಿದ್ದಾರೆ. ಪ್ರತಿ ಗ್ರಾಮದಿಂದಲೂ ಸಮಾವೇಶಕ್ಕೆ ಜನರನ್ನು ಒಯ್ಯಲು ಕೆಎಸ್ಆರ್ಟಿಸಿ, ಬಿಎಂಟಿಸಿ ಹಾಗೂ ಖಾಸಗಿ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬೂತ್ ಮಟ್ಟದಲ್ಲಿ ಸೇರಿ ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಸ್ಥಳಿಯ ಜೆಡಿಎಸ್ ಮುಖಂಡರಿಗೆ ಕಾರ್ಯಕರ್ತರನ್ನು ಕರೆದುಕೊಂಡು ಬರುವ ಹೊಣೆ ವಹಿಸಲಾಗಿತ್ತು. ಹಾಗಾಗಿ ಸ್ಥಳಿಯ ಮುಖಂಡರು ಹುಮ್ಮಸ್ಸಿನಿಂದಲೇ ತಮ್ಮ ಕಾರ್ಯ ಮಾಡಿದ್ದಾರೆ.