ಜಲ ಸಮಸ್ಯೆ ಕಂಡುಬಂದರೆ ತಕ್ಷಣ ಪರಿಹರಿಸಿ

ದೇವದುರ್ಗ ತಾಪಂ ಆವರಣದಲ್ಲಿ ಶುಕ್ರವಾರ ಸಹಾಯಕ ಆಯುಕ್ತ ಗಜಾನನ ಬಾಲೆ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಆರ್‌ಡಿಎಸ್ ಅಧಿಕಾರಿ ಹೀರಾಲಾಲ್, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಶ್ರೀನಿವಾಸ್ ಮೂರ್ತಿ ಇದ್ದರು.
ದೇವದುರ್ಗ ತಾಪಂ ಆವರಣದಲ್ಲಿ ಶುಕ್ರವಾರ ಸಹಾಯಕ ಆಯುಕ್ತ ಗಜಾನನ ಬಾಲೆ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಆರ್‌ಡಿಎಸ್ ಅಧಿಕಾರಿ ಹೀರಾಲಾಲ್, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಶ್ರೀನಿವಾಸ್ ಮೂರ್ತಿ ಇದ್ದರು.
Published on

ದೇವದುರ್ಗ: ಬೇಸಿಗೆ ಶುರುವಾಗಿರುವುದರಿಂದ ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿಯಲ್ಲಿ ನೀರಿನ ಹರಿವು ತಗ್ಗಿದ್ದು, ಕುಡಿವ ನೀರಿನ ವಿಷಯದಲ್ಲಿ ಉದಾಸೀನ ತೋರಬೇಡಿ ಎಂದು ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಗಜಾನನ ಬಾಲೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಬಲದಂಡೆ ನಾಲೆಯಲ್ಲಿ ನೀರಿನ ಹರಿವು ಇರುವಷ್ಟು ದಿನ ಜೀವಜಲದ ತೊಂದರೆ ಎದುರಾಗಿದ್ದಿಲ್ಲ. ಈಗ ಬೇಸಿಗೆಯ ತೀವ್ರತೆ ಹೆಚ್ಚಿದ್ದು, ಜನ-ಜಾನುವಾರುಗಳಿಗೆ ನೀರಿನ ಅಗತ್ಯ ಇದೆ. ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಬಗ್ಗೆ ಗ್ರಾಪಂಗಳು ವಿಶೇಷ ಕಾಳಜಿವಹಿಸಬೇಕು. ಬೋರ್‌ವೆಲ್‌ಗಳ ಸಮರ್ಪಕ ನಿರ್ವಹಣೆ ಜತೆಗೆ ಅಗತ್ಯವಿದ್ದಲ್ಲಿ ಟ್ಯಾಂಕರ್ ನೀರು ಇಲ್ಲವೇ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಸಬೇಕು. ತೊಂದರೆ ಕಂಡುಬಂದ ಕಡೆ ತ್ವರಿತವಾಗಿ ಸ್ಪಂದಿಸಬೇಕು. ಹೇಮನಾಳ ಗ್ರಾಪಂನಲ್ಲಿ ಕುಡಿವ ನೀರಿನ ಸಮಸ್ಯೆಯಿದ್ದು, ಕೊಪ್ಪರದ ನದಿ ದಂಡೆಯಿಂದ ಪೈಪ್‌ಲೈನ್ ಕಾಮಗಾರಿ ಬೇಗ ಮುಗಿಸಿ ಜನರಿಗೆ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.

ಚಿಂಚೋಡಿ ಗ್ರಾಪಂ ವ್ಯಾಪ್ತಿಯ ಅಗಸರದೊಡ್ಡಿ ಗ್ರಾಮಕ್ಕೆ ವೀರಗೋಟ ಸಮೀಪದ ನದಿಯಿಂದ ನೀರು ಪೂರೈಸಬೇಕು. ಆರ್‌ಒ ಪ್ಲಾಂಟ್‌ಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕು. ದುರಸ್ತಿಗೆ ಬಂದ ಪ್ಲಾಂಟ್‌ಗಳನ್ನು ತಕ್ಷಣ ರಿಪೇರಿ ಮಾಡಿಸಬೇಕು. ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ನಿಷ್ಕಾಳಜಿ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಆರ್‌ಡಿಎಸ್ ಅಧಿಕಾರಿ ಹೀರಾಲಾಲ್, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಶ್ರೀನಿವಾಸ್ ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net