ಜಯಶ್ರೀಗೆ ಪ್ರಥಮ ರ‌್ಯಾಂಕ್

CTD 14 S.J.JAYSHRI--0004
Published on

ಚಿತ್ರದುರ್ಗ: ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸ್ನಾತಕೋತ್ತರ ವಿಭಾಗದ ಸಸ್ಯಶಾಸ್ತ್ರ ವಿಷಯದ ವಿದ್ಯಾರ್ಥಿನಿ ಎಸ್.ಜೆ.ಜಯಶ್ರೀ ಪ್ರಥಮ ರ‌್ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ದಾವಣಗೆರೆ ವಿವಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರು ಪ್ರಮಾಣ ಪತ್ರ ಮತ್ತು ಪದಕ ಪ್ರದಾನ ಮಾಡಿದರು. ಜಯಶ್ರೀ ಅವರು ಹಿರಿಯೂರು ತಾಲೂಕು ಶ್ರವಣಗೆರೆ ಗ್ರಾಮದ ಎಸ್.ಜಯಣ್ಣ-ರತ್ನಮ್ಮ ಅವರ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net