ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ಪ್ರದಾನ

Jayashree Guttal
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ದತ್ತಿ ನಿಮಿತ್ತ ಸೆ. 16ರಂದು ಸಂಜೆ 6 ಗಂಟೆಗೆ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2023 ಪ್ರದಾನ ಸಮಾರಂಭ ಏರ್ಪಡಿಸಿದೆ.
ಪಾಲಿಕೆ ಮೇಯರ್ ವೀಣಾ ಭರದ್ವಾಡ ಪ್ರಶಸ್ತಿ ಪ್ರದಾನ ಮಾಡುವರು. ಅತಿಥಿಗಳಾಗಿ ಮಾಜಿ ಮೇಯರ್ ಪೂರ್ಣಾ ಪಾಟೀಲ, ಡಾ. ಶ್ರೀಧರ ಕುಲಕರ್ಣಿ, ಸುಪ್ರಿಯಾ ಭಟ್, ವಿಶ್ವೇಶ್ವರಿ ಹಿರೇಮಠ ಆಗಮಿಸುವರು. ಡಾ. ಆನಂದ ಪಾಂಡುರಂಗಿ ಅಧ್ಯಕ್ಷತೆ ವಹಿಸುವರು.
ಎಸ್‌ಡಿಎಂ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕೃತಿಕಾ ಸತ್ಯಬೋಧ ಗುತ್ತಲ ಬಹುಮಾನ ವಿತರಿಸುವರು. ಪಾಲಿಕೆ ನಿವೃತ್ತ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಬಿ. ಗುತ್ತಲ ಉಪಸ್ಥಿತರಿರುವರು. ಮೂಲ ಜಾನಪದ ಹಾಡುಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಹಿಳಾ/ಭಜನಾ ಮಂಡಳಕ್ಕೆ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2023 ಪ್ರದಾನ ಮಾಡಲಾಗುವುದು.
ಇದಕ್ಕೂ ಪೂರ್ವದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಮೂಲ ಜಾನಪದ ಹಾಡುಗಳ ಸ್ಪರ್ಧೆ ಜರುಗಲಿದೆ. ಸಾಹಿತಿ ಸರೋಜಾರಾವ್ ಸ್ಪರ್ಧೆಯ ಸಂಯೋಜನೆ ಮಾಡುವರು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net