

ಕಲಬುರಗಿ: ಜಯನಗರ ಶಿವಮಂದಿರದಲ್ಲಿ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ನಿಂದ ಶ್ರಾವಣ ಮಾಸದ ಪ್ರಯುಕ್ತ ಆ.೫ರಿಂದ ಸೆ.೧ರವರೆಗೆ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪುರ ತಿಳಿಸಿದರು.
ಪುರಾಣ, ಪ್ರವಚನದ ಬಗ್ಗೆ ಶ್ರದ್ಧೆ ಕ್ಷೀಣಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಜಯನಗರ ಶಿವಮಂದಿರದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಅಧ್ಯಾತ್ಮಿಕ ಪ್ರವಚನ, ಪುರಾಣ ಏರ್ಪಡಿಸಲಾಗುತ್ತಿದೆ. ಪ್ರಸಕ್ತ ವರ್ಷ ಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿತ್ಯ ಸಂಜೆ ೭ ರಿಂದ ರಾತ್ರಿ ೮ರ ವರೆಗೆ ಚಿಂಚೋಳಿ ತಾಲೂಕಿನ ಐನಾಪುರದ ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತಿç ಅವರಿಂದ ಶ್ರೀ ಶರಣಬಸವೇಶ್ವರ ಪುರಾಣ ನಡೆಯಲಿದೆ. ರಾತ್ರಿ ೮ ರಿಂದ ೮.೩೦ರ ವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರಗಳ ಗಣ್ಯರು, ಚಿಂತಕರು ಮತ್ತು ಸಾಹಿತಿಗಳು, ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಆ.೫ರಂದು ಸಂಜೆ ೭ಕ್ಕೆ ಜಯನಗರ ಶಿವಮಂದಿರದಲ್ಲಿ ಹಮ್ಮಿಕೊಂಡ ಪುರಾಣ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲï ಚಾಲನೆ ನೀಡಲಿದ್ದಾರೆ. ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಟ್ರಸ್ಟ್ ಗೌರವಾಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪುರ ಅಧ್ಯಕ್ಷ ತೆ ವಹಿಸುವರು. ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಮಹಿಳಾ ಘಟಕದ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ವೀರೇಶ ದಂಡೋತಿ, ಸೂರ್ಯಕಾಂತ ಕೆ.ಬಿ., ಶಿವಕುಮಾರ ಪಾಟೀಲ್, ಬಸವರಾಜ ಮಾಗಿ, ಸಿದ್ದಲಿಂಗ ಗುಬ್ಬಿ, ಬಂಡಪ್ಪ ಕೇಸೂರ, ವೀರಪ್ಪ ಹುಡಗಿ, ಮಲ್ಲಯ್ಯಸ್ವಾಮಿ, ಮನೋಹರ ಬಡಶೇಷಿ ಇತರರಿದ್ದರು.