ಜಯದೇವ ಶ್ರೀಗಳ 150 ನೇ ಜಯಂತ್ಯುತ್ಸವ

CTD SRI JAYADEVA SRI-JMIT--0002
Published on

ಚಿತ್ರದುರ್ಗ: ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ ಜಯದೇವ ಶ್ರೀಗಳ 150 ನೇ ಜಯಂತ್ಯುತ್ಸವವನ್ನು ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಮಾತನಾಡಿ, ಶ್ರೀಗಳು ಸ್ಥಾಪಿಸಿದ ವಿದ್ಯಾರ್ಥಿನಿಲಯಗಳು ಇಂದಿಗೂ ಕರ್ನಾಟಕದೊಂದಿಗೆ ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯತಾಣಗಳಾಗಿವೆ ಎಂದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಕುಮಾರಸ್ವಾಮಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ಜಯದೇವ ಶ್ರೀಗಳೊಂದಿಗೆ ದೇಶದ ಅಭಿವೃದ್ಧಿ ಹಾಗೂ ಅಸ್ಪಶ್ಯತೆ ನಿವಾರಣೆ ಕುರಿತು ಚರ್ಚಿಸಿದ್ದರು. ಮೈಸೂರಿನ ಆಸ್ಪತ್ರೆ ಅಭಿವೃದ್ಧಿಗೆ ದೇಣಿಗೆ ನೀಡಿದ್ದರು. ಸಮಾಜದ ಒಳಿತಿಗಾಗಿ ಹಲವು ಕಾರ್ಯಗಳೊಂದಿಗೆ ಶ್ರೀ ಮಠವನ್ನು ಸುದೀರ್ಘ ಅವಧಿಗೆ ಮುನ್ನಡೆಸಿದ್ದರು ಎಂದರು. ಎನ್.ಮಹಾಂತೇಶ್, ಡಾ.ಸಿದ್ದೇಶ್, ಡಾ.ನಿರಂಜನ್, ಡಾ.ಬಿ.ಜಿ.ಕುಮಾರಸ್ವಾಮಿ, ಪ್ರೊ.ಶಶಿಧರ್, ಡಾ.ಶೈಲೇಶ್, ಡಾ.ಜಗನ್ನಾಥ್ ಮತ್ತಿತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net