

ಚಿತ್ರದುರ್ಗ: ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಯದೇವ ಶ್ರೀ ಜಯಂತಿಯನ್ನು ಆಚರಿಸಲಾಯಿತು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಎಲ್.ಈಶ್ವರಪ್ಪ ಅವರು, ನಾಡಿನಲ್ಲಿ ಉಚಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಅಕ್ಷರ ಕ್ರಾಂತಿಗೆ ಶ್ರೀಗಳು ಕಾರಣರಾಗಿದ್ದಾರೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಟಿ.ಜಯಣ್ಣ, ನವೀನ್‌ಮಸ್ಕಲ್, ಜಿ.ಎಸ್.ನಾಗರಾಜ, ಗಿರೀಶ್, ಬಿ.ವೈ.ಶ್ವೇತಾ, ಶ್ರೀಕುಮಾರ್, ಮಿಸಬಾಖಾನುಂ, ಮಧು, ಎನ್.ಲೋಕೇಶ್, ಕುಮಾರಸ್ವಾಮಿ, ಗುರುರಾಘವೇಂದ್ರ, ವಸಂತ, ಚಂದ್ರಮ್ಮ, ರುದ್ರಪ್ಪ, ಪರಶುರಾಂ ಮತ್ತಿತರರು ಇದ್ದರು.