

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಮಂಗಳವಾರ ಹಿರಿಯ ಶ್ರೀಗಳ ಸಂಸ್ಮರಣ 1,200 ಪುಟಗಳ ಜಯದೇವ ದಿಗ್ವಿಜಯ ಪುಸ್ತಕ ಲೋಕಾರ್ಪಣೆಗೊಂಡಿತು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ, ಪಂಚಮ ಶಿವಲಿಂಗೇಶ್ವರ ಶ್ರೀ, ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಚನ್ನಬಸಣ್ಣ ಶ್ರೀ, ಶ್ರೀ ಗುರುಬಸವ ಪಟ್ಟದೇವರು, ಮೋಕ್ಷಪತಿ ಶ್ರೀ, ಡಾ.ಷಡಕ್ಷರಿ ಶ್ರೀ, ಜಯ ಬಸವಾನಂದ ಶ್ರೀ, ಇಮ್ಮಡಿ ಷಡಕ್ಷರ ಶ್ರೀ, ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ ಕಳಸದ, ಎನ್‌ಜಿಇಎಫ್‌ನ ನಿವೃತ್ತ ಜನರಲ್ ಮ್ಯಾನೇಜರ್ ಎನ್.ಟಿ.ಸಿದ್ಧರಾಮಣ್ಣನವರ್, ಪುಸ್ತಕದ ಪ್ರಧಾನ ಸಂಪಾದಕ ಬೈರಮಂಗಲ ರಾಮೇಗೌಡರು, ಸಾಹಿತಿ ಎಸ್.ಆರ್ ಗುಂಜಾಳ್ ಇತರರಿದ್ದರು.