ಜಯದೇವ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣ

2910 KLB 07
Published on

ಕಲಬುರಗಿ: ಡಾ.ಎಸ್.ಎಂ. ಪಂಡಿತ ರಂಗಮAದಿರ ಎದುರು ನಿರ್ಮಾಣಗೊಳ್ಳುತ್ತಿರುವ ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋಧನಾ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿ ಡಿಸೆಂಬರ್‌ನಲ್ಲಿ ಜನವರಿಯಲ್ಲಿ ಜನಸೇವೆಗೆ ಸಮರ್ಪಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ ಜತೆ ಭಾನುವಾರ ಕಾಮಗಾರಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಆಸ್ಪತ್ರೆಗೆ ಅಗತ್ಯವಿರುವ ಕುಡಿವ ನೀರು, ಎಸ್‌ಟಿಪಿ, ಅಗ್ನಿ ಅವಘಡಗಳ ಸುರಕ್ಷತಾ ಕ್ರಮಗಳ ಕುರಿತು ಸಮಗ್ರ ವರದಿ ನೀಡುವಂತೆ ಜಲಮಂಡಳಿ ಮತ್ತು ಅಗ್ನಿಶಾಮಕ ದಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಿಬ್ಬಂದಿ ನೇಮಕ ಪ್ರಕ್ರಿಯೆ ಶುರುವಾಗಿದ್ದು, ಒಂದು ಹಂತದ ಸಂದರ್ಶನ ಪೂರ್ಣಗೊಂಡಿದೆ. ಈ ಕೇಂದ್ರದಲ್ಲಿ ಮೂರು ಕ್ಯಾಥ್‌ಲ್ಯಾಬ್ ಇರಲಿವೆ. ೩೭೧ ಹಾಸಿಗೆಗಳಿರಲಿದ್ದು, ಅದರಲ್ಲಿ ೧೨೫ ಐಸಿಯು, ೨೦೦ ಸಾಮಾನ್ಯ ಮತ್ತು ೫೦ ಬೆಡ್ ಸುಪರ್ ಸ್ಪೆಷಾಲಿಟಿ, ಡಿಲಕ್ಸ್ ಮತ್ತು ಸ್ಪೆಷಲ್ ಬೆಡ್‌ಗಳಿರಲಿವೆ ಎಂದು ತಿಳಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್, ಜಯದೇವ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ, ಕಲಬುರಗಿ ಕೇಂದ್ರದ ಮುಖ್ಯಸ್ಥ ಡಾ.ಬಾಬುರಾವ ಹುಡಗಿಕರ್, ಮುಖಂಡ ನೀಲಕಂಠ ಮೂಲಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net