ಜಯದೇವ ಆಸ್ಪತ್ರೆಗೆ ಧರಂಸಿಂಗ್​ ಹೆಸರಿಡಿ

Front 5 N Dharam Singh
Published on

ಕಲಬುರಗಿ: ನಗರದಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಹೃದ್ರೋಗ ವಿಜಾನ ಮತ್ತು ಸಂಶೋಧನಾ ಕೇಂದ್ರಕ್ಕೆ ಮಾಜಿ ಸಿಎಂ ಎನ್.ಧರ್ಮಸಿಂಗ್ ಹೆಸರಿಡಬೇಕು ಎಂದು ಹಿಂದೂ ಜಾಗೃತಿ ಸೇನೆ ಜಿಲ್ಲಾ ಲಕ್ಷ್ಮೀಕಾಂತ ಸ್ವಾದಿ ಆಗ್ರಹಿಸಿದರು. ಜಯದೇವ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಕೆಕೆಆರ್‌ಡಿಬಿಯಿಂದ ೧೮೩ ಕೋಟಿ ರೂ. ಅನುದಾನ ನೀಡಲಾಗಿದೆ. ಹೀಗಾಗಿ ಈ ಭಾಗದ ಶ್ರೇಷ್ಠ ನಾಯಕ, ಮಾಜಿ ಸಿಎಂ ಧರ್ಮಸಿಂಗ್ ಹೆಸರು ಸೂಕ್ತವಾಗಿದೆ. ಕೆಕೆಆರ್‌ಡಿಬಿಗೆ ಈಗ ಧರ್ಮಸಿಂಗ್ ಪುತ್ರ ಡಾ.ಅಜಯಸಿಂಗ್ ಅಧ್ಯP್ಷÀರಿz್ದÁರೆ. ಧರ್ಮಸಿಂಗ್ ಹೆಸರಿಡುವುದಕ್ಕೆ ಇದು ಸಕಾಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಗಮನಹರಿಸಿ ಹೆಸರಿಡುವ ಪ್ರಸ್ತಾವನೆಗೆ ಚಾಲನೆ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಪ್ರಮುಖರಾದ ಸಂತೋಷ ಸೋನಾವಣೆ, ದಶರಥ ಇಂಗೋಳೆ, ಸಂಜನಾ, ಭಾಗ್ಯಶ್ರೀ, ಪ್ರದೀಪ ಚೌದ್ರಿ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net