ಜಯದ ಸಂಕೇತವೇ ವಿಜಯದಶಮಿ

ydg1
ಕೆಂಭಾವಿ ಉತ್ತರಾದಿ ಮಠ ಬೀದಿಯಲ್ಲಿ ಶನಿವಾರ ಮಧ್ವ ಜಯಂತಿ ಅಂಗವಾಗಿ ಮಧ್ವಾಚಾರ್ಯ ಭಾವಚಿತ್ರದ ಮೆರವಣಿಗೆ ನಡೆಯಿತು.
Published on

ಕೆಂಭಾವಿ: ಮಹಾಭಾರತದಲ್ಲಿ ವಿಜಯ ದಶಮಿ ವಿಜಯದ ಸಂಕೇತವಾಗಿದ್ದು, ಭಗವಂತ ಪದ್ಮಾವತಿಯನ್ನು ವಿವಾಹವಾಗುವುದರ ಮೂಲಕ ಪ್ರಪಂಚದ ಭಕ್ತರಿಗೆ ತನ್ನ ಮಹಾತ್ಮೆ ತೋರಿಸಿಕೊಟ್ಟ ಮಹಾನ್ ದಿನ ಎಂದು ಪಂ. ಪ್ರಹ್ಲಾದಾಚಾರ್ಯ ಜೋಶಿ ಹೇಳಿದರು.

ಶ್ರೀ ನಿವಾಸ ಕಲ್ಯಾಣ ಮಹೋತ್ಸವ ಹಾಗೂ ಆಚಾರ್ಯ ಮಧ್ವರ ಜಯಂತಿ ನಿಮಿತ್ತ ಪಟ್ಟಣದ ಉತ್ತರಾದಿ ಮಠದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಅವರು, ಭೂವೈಕುಂಠ ಎಂದು ಕರೆಸಿಕೊಳ್ಳುವ ತಿರುಪತಿ ಹಿಂದುಗಳಿಗೆ ಅತ್ಯಂತ ಪವಿತ್ರ ಕ್ಷೇತ್ರ. ಅಲ್ಲಿ ನೆಲೆಸಿರುವ ವೆಂಕಟೇಶ ದೇವರು ಭಕ್ತರ ಇಷ್ಟಾರ್ಥ ಈಡೇರಿಸುವ ದೈವ. ಆತನ ನಿತ್ಯ ಸ್ಮರಣೆಯೇ ಜೀವನದ ಪ್ರಮುಖ ಕೆಲಸವಾಗಬೇಕು. ದ್ವೆÊತಮತ ಸ್ಥಾಪಕರಾದ ಮಧ್ವಾಚಾರ್ಯರು ಸಾಕ್ಷಾತ್ ಹನುಮಂತ ದೇವರ ಮೂರನೇ ಅವತಾರ. ಅವರು ತಿಳಿಸಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.

ನAತರ ವಿಜಯಾಚಾರ್ಯ ಪುರೋಹಿತ ಪೌರೋಹಿತ್ಯದಲ್ಲಿ ಮುರಲೀಧರ ಕುಲಕರ್ಣಿ ದಂಪತಿ ವೈಭವೋಪೇತ ಮಂಟಪದಲ್ಲಿ ಪದ್ಮಾವತಿ-ವೆಂಕಟೇಶ ದೇವರ ವಿವಾಹೋತ್ಸವ ನೆರವೇರಿಸಿದರು.

ಜಯಸತ್ಯಪ್ರಮೋದ ಸೇವಾ ಸಂಘ, ಶ್ರೀ ಸತ್ಯಪ್ರಮೋದ ಯುವ ಸೇನೆ, ರಘೂತ್ತಮ ಭಜನಾ ಮಂಡಳಿ ಹಾಗೂ ಪ್ರಮೋದಿನಿ ಮಹಿಳಾ ಭಜನಾ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net