

ಕೂಡ್ಲಿಗಿ: ಸರ್ಕಾರದ ನಿರ್ದೇಶನದಂತೆ ಮಹನೀಯರ ಜಯಂತಿಗಳನ್ನು ತಾಲೂಕು ಆಡಳಿತದಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಮಹನೀಯರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಏ.10 ರಂದು ಮಹಾವೀರ, 12 ರಂದು ಅಕ್ಕಮಹಾದೇವಿ, 30ರಂದು ಬಸವ ಜಯಂತಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸುನೀಲ್ ಗೌಡ, ತಾಪಂ ಇಒ ಕೆ.ನರಸಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಹೊಂಬಾಳೆ ರೇವಣ್ಣ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳಾದ ಕಾಮಶೆಟ್ಟಿ ನಾಗರಾಜ, ಕೋಗಳಿ ಮಂಜುನಾಥ, ಜಿ.ಎಸ್.ಗಿರೀಶ್, ಬಸವರಾಜ ಕಂಪ್ಲಿ, ಕೆ.ಎಸ್.ವೀರೇಶ್, ವೀರಶೈವ ಯುವಕ ಸಂಘದ ಅಧ್ಯಕ್ಷ ಕೆ.ಎಂ.ವೀರೇಶ್, ಕಾಶೆಟ್ಟಿ ಕೊಟ್ರೇಶ್, ಗುಳುಗಿ ವೀರೇಶ್ ಇತರರಿದ್ದರು.