ಜಯ ಘೋಷಗಳ ಮಧ್ಯೆ ವೈಭವದ ರಥೋತ್ಸವ

18 HBD 1
 ಚಿಟಗುಪ್ಪ ತಾಲೂಕಿನ ಸುಕ್ಷೇತ್ರ ಕರಕನಳ್ಳಿಯ ಶ್ರೀ ಗಂಗಾಧರ ಬಕ್ಕಪ್ರಭುಗಳ ೨೧೧ನೇ ಜಾತ್ರೋತ್ಸವದ ನಿಮಿತ್ತ ಸೋಮವಾರ ರಾತ್ರಿ ಅಪಾರ ಭಕ್ತಾಧಿಗಳ ಮಧ್ಯೆ ಸಡಗರ ಸಂಭ್ರದಿಂದ ರಥೋತ್ಸವ ಜರುಗಿತು.
Published on

ಚಿಟಗುಪ್ಪ: ಸುಕ್ಷೇತ್ರ ಕರಕನಳ್ಳಿ ಗ್ರಾಮದಲ್ಲಿ ಶ್ರೀ ಗುರು ಗಂಗಾಧರ ಬಕ್ಕಪ್ರಭುಗಳ ೨೧೧ನೇ ಜಾತ್ರೋತ್ಸವದ ನಿಮಿತ್ತ ಸೋಮವಾರ ರಾತ್ರಿ ಅಪಾರ ಭಕ್ತರ ಜಯ ಘೋಷಗಳ ಮಧ್ಯೆ ಶ್ರದ್ಧಾ, ಭಕ್ತಿಯೊಂದಿಗೆ ಸಂಭ್ರಮದಿಂದ ರಥೋತ್ಸವ ಜರುಗಿತು.

ಸೋಂತದ ಶ್ರೀ ಶಂಕರಲಿಂಗ ಸ್ವಾಮೀಜಿ, ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಬೇಮಳಖೇಡದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಾನಿಧ್ಯದಲ್ಲಿ ರಥೋತ್ಸವ ಜರುಗಿತು. ಬಾಜಾ ಭಜಂತ್ರಿ ಮತ್ತಿತರೆ ವಾದ್ಯ ಮೇಳಗಳ ಕಲಾ ತಂಡಗಳ ಪ್ರದರ್ಶನ ಕಣ್ಮನ ಸೆಳೆಯಿತು. ಬಾನೆತ್ತರಕ್ಕೆ ಹಾರಿದ ಪಟಾಕಿಗಳ ಬಣ್ಣ ಬಣ್ಣದ ಓಕುಲಿ ಪ್ರಮುಖ ಆಕರ್ಷಣೆಯಾಗಿತ್ತು.

ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು, ಉತ್ಸವ ಸಮಿತಿಯ ಪ್ರಮುಖರು, ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಅಸಂಖ್ಯಾತ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಪ್ರಮುಖರಾದ ಸತ್ಯನಾರಾಯಣರೆಡ್ಡಿ ಎಲಚೆಲ, ಗಂಗಾರೆಡ್ಡಿ ಮಟಾಟಿ, ಪಾಂಡುರಂಗ ರೆಡ್ಡಿ, ಲಕ್ಷ್ಮೀಕಾಂತರೆಡ್ಡಿ, ಗೋಪಾಲರೆಡ್ಡಿ ನಿರ್ಣಾ, ಅಶೋಕ ರಾಮಜಿ, ರಾಜಪ್ಪಾ ಮುತ್ಯಾ, ಲಕ್ಷ್ಮೀಕಾಂತ ಕುಲಕರ್ಣಿ, ಜಗನ್ನಾಥ ರೆಡ್ಡಿ ಮಟಾಟಿ, ನಾಗಪ್ಪ ಮಕಾಜಿ, ಪ್ರಭು ಘಾಟೊಳ್ಳಿ, ಜಗನ್ನಾಥ ಗಾರಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net