ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅತ್ಯುತ್ತಮ ಗೌರವ

21 skpp 2
ಸಕಲೇಶಪುರದ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ಅಧ್ಯಕ್ಷ ದಿವಾನ್‌ಬೆಟ್ಟ ಬಸವಣ್ಣ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಕಬ್ಬಿನಹಳ್ಳಿ ಜಗದೀಶ್, ಉದಯಶಂಕರ್, ಬಿ.ಬಿ.ಲೋಕೇಶ್, ಜಯಣ್ಣ, ಲೋಕೇಶ್ ಇದ್ದರು.
Published on

ಸಕಲೇಶಪುರ: ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎರಡನೇ ಅತ್ಯುತ್ತಮ ಕೃಷಿ ಪತ್ತಿನ ಸಹಕಾರ ಸಂಘ ಎಂಬ ಬಿರುದು ಪಡೆದುಕೊಂಡಿದೆ. ಸದ್ಯ ಸಂಘಕ್ಕೆ ಬಂದಿರುವ ಲಾಭದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡದ ಕಾಮಗಾರಿ ಕೈಗೊಳ್ಳಲಾಗಿದ್ದು ಶೀಘ್ರವೇ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ದಿವಾನ್‌ಬೆಟ್ಟ ಬಸವಣ್ಣ ತಿಳಿಸಿದರು.

ಬಾಳ್ಳುಪೇಟೆ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಪಡಿತರ ವಿತರಣೆ, ಸೀಮೆಎಣ್ಣೆ, ರಸಗೊಬ್ಬರ ಹಾಗೂ ಖಾಲಿ ಚೀಲಗಳ ಮಾರಾಟದ ಮೂಲಕ 94 ಲಕ್ಷ ರೂ. ವಹಿವಾಟು ನಡೆಸಲಾಗಿದೆ. 2022-23ನೇ ಸಾಲಿನಲ್ಲಿ 17 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ, ತಾಲೂಕಿನ ಬಹುತೇಕ ಕೃಷಿ ಪತ್ತಿನ ಸಹಕಾರ ಸಂಘಗಳು ಲಭದಲ್ಲಿವೆ. ಇದು ರೈತರು ಹಾಗೂ ಸಂಘದಲ್ಲಿನ ಉತ್ತಮ ಒಡನಾಟಕ್ಕೆ ಕನ್ನಡಿಯಾಗಿದೆ. ರೈತರು ಸಂಘದೊಂದಿಗೆ ವ್ಯವಹರಿಸುವ ವೇಳೆ ಶಿಸ್ತನ್ನು ಆಳವಡಿಸಿಕೊಂಡಾಗ ಸಂಘಗಳು ಅಭಿವೃದ್ಧಿ ಪಥದಲ್ಲಿ ಸಾಗಲಿವೆ. ಸದ್ಯ ತಾಲೂಕಿನ ಎಲ್ಲ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಸಂಘದ ಉಪಾಧ್ಯಕ್ಷ ಉದಯಶಂಕರ್, ನಿರ್ದೇಶಕರಾದ ಬಿ.ಬಿ.ಲೋಕೇಶ್, ಜಯಣ್ಣ, ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net