ಜಮೀರ್ ವಿರುದ್ಧ ಒಕ್ಕಲಿಗರ ಸಂಘ ಕಿಡಿ

Published on

ಮೈಸೂರು: ಸಚಿವ ಜಮೀರ್ ಅಹಮದ್ ಖಾನ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಣ್ಣದ ನೆಪದಲ್ಲಿ ನಿಂದಿಸಿರುವುದು ವರ್ಣಬೇಧ, ಧರ್ಮ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಜಿಲ್ಲಾ ಒಕ್ಕಲಿಗರ ಸಂಘ ಟೀಕಿಸಿದೆ.

ಇಡೀ ದೇವೇಗೌಡರ ಕುಟುಂಬವನ್ನು ಮುಸ್ಲಿಂ ಸಮುದಾಯದವರು ಒಂದೊಂದು ರೂ.ನಂತೆ ಸಂಗ್ರಹಿಸಿ ಖರೀದಿಸುತ್ತಾರೆ ಎಂಬ ಹೇಳಿಕೆ ಸಾಮಾಜಿಕ ಸಂಘರ್ಷದ ಹೇಳಿಕೆಯಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಾವುದೇ ರೀತಿಯ ಬಣ್ಣ, ಧರ್ಮ ಹಾಗೂ ಜಾತಿಯ ವಿಷಯವಾಗಿ ಅಸಮಾನತೆ ಎತ್ತಿ ತೋರುವುದು ಸಂವಿಧಾನಕ್ಕೆ ವಿರುದ್ಧ. ಹೀಗಿರುವಾಗಿ ಒಬ್ಬ ಸಚಿವರಾಗಿ ಜಮೀರ್ ಅಹಮದ್‌ಖಾನ್ ಈ ರೀತಿಯ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಸರಿಯಲ್ಲ. ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು. ಜತೆಗೆ ಸಿಎಂ ಸಹಾ ಅವರನ್ನು ಸಂಪುಟದಿ ಅವರನ್ನು ವಜಾಗೊಳಿಸಿ, ಶಾಸಕತ್ವದಿಂದ ಅನರ್ಹಗೊಳಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಸಂಘದ ನಿರ್ದೇಶಕ ಎ.ರವಿ, ನಗರಪಾಲಿಕೆ ಮಾಜಿ ಸದಸ್ಯೆ ಪ್ರೇಮಾ ಶಂಕರೇಗೌಡ, ಮುಖಂಡರಾದ ಸಿ.ಟಿ. ಗಂಗಾಧರ್, ತೇಜೇಶ್ ಲೋಕೇಶ್‌ಗೌಡ, ಚೇತನ್, ಶಿವಲಿಂಗಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net