ಜಮೀರ್ ಅಹ್ಮದ್ ಖಾನ್ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಅಸ್ಲಾಂ ಆಯ್ಕೆ

ಜಮೀರ್ ಅಹ್ಮದ್ ಖಾನ್ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಅಸ್ಲಾಂ ಆಯ್ಕೆ
Published on

ಹಾಸನ: ಕರ್ನಾಟಕ ರಾಜ್ಯ ಜಾತ್ಯತೀತ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಅಸ್ಲಾಂ ಅವರನ್ನು ನೇಮಕ ಮಾಡಲಾಗಿದೆ ಎಂದು ಬ್ರಿಗೇಡ್ ಕಾರ್ಯಾಧ್ಯಕ್ಷ ಮುದಾಸೀರ್ ನವಾಜ್ ತಿಳಿಸಿದರು.
ಎಲ್ಲ ಸಮಾಜ ಮತ್ತು ಎಲ್ಲ ಜಾತಿಯ, ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಇಡೀ ಕರ್ನಾಟಕದ ಅಭಿವೃದ್ಧಿ, ಬಡವರು, ದಲಿತರು, ಅಲ್ಪಸಂಖ್ಯಾತರಿಗೆ ಒಳ್ಳೆಯ ವಿಚಾರವನ್ನು ತಲುಪಿಸುವ ಉದ್ದೇಶದಿಂದ ರಾಜ್ಯಮಟ್ಟದಲ್ಲಿ ಜಮೀರ್ ಅಹ್ಮದ್ ಖಾನ್ ಬ್ರಿಗೆಡ್ ಸ್ಥಾಪನೆ ಮಾಡಲಾಗಿದೆ. ಈಗ ಹಾಸನ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ. ಒಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಸ್ಲಾಂ ಅವರ ತಂದೆಯಾದ ದಿ. ಶೇಖ್ ಹುಸೇನ್ ಅವರು, ನಾಡಪರ ಚಿಂತನೆ ಮಾಡಿದವರು. ಜಾತಿ, ಧರ್ಮ ಭೇದವಿಲ್ಲದೆ ಸಮಾಜಸೇವೆ ಹಾಗೂ ಹೋರಾಟದ ಮನೋಭಾವ ಹೊಂದಿದ್ದವರು. ನಮ್ಮ ಬ್ರಿಗೇಡ್ ರಾಜ್ಯಾಧ್ಯಕ್ಷರಾದ ಗುಜ್ಜಲ್ ಲಿಂಗಣ್ಣ ನಾಯಕ ಅವರ ನೇತೃತ್ವದಲ್ಲಿ ಹಾಸನ ಜಿಲ್ಲಾಧ್ಯಕ್ಷರನ್ನಾಗಿ ಅಸ್ಲಾಂ ಅವರನ್ನು ನೇಮಕ ಮಾಡಿ ಆದೇಶ ನೀಡಲಾಗಿದೆ. ಇವರಿಗೆ ನೀಡಿರುವ ಈ ಗುರುತರ ಜವಾಬ್ದಾರಿ ಹುದ್ದೆಯನ್ನು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಿ ನಾಡಿನ ಅಭ್ಯದಯಕ್ಕೆ ಹಾಗೂ ಬಡವರ, ದಲಿತರ ಏಳಿಗೆಗಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಅಸ್ಲಾಂ ಅವರು ತಕ್ಷಣ ಜವಾಬ್ದಾರಿ ವಹಿಸಿಕೊಂಡು ಹಾಸನ ಜಿಲ್ಲೆಯ ಬ್ರಿಗೇಡ್ ಬಲಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುವಂತೆ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ರಿಗೇಡ್ ರಾಜ್ಯಾಧ್ಯಕ್ಷ ಗುಲ್ಜರ್ ಲಿಂಗಣ್ಣ ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ರಾಜ್ಯ ಯುವ ಘಟಕದ ಅಧ್ಯಕ್ಷ ಸಂದೀಪ್ ಕುಮಾರ್, ಮಹಿಳಾ ಜಿಲ್ಲಾಧ್ಯಕ್ಷರಾದ ಮುಬೀನಾ ಬೇಗಂ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net