

ಬೆಳಗಾವಿ: ಹುಕ್ಕೇರಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟಂಬಗಳು ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು 50 ವರ್ಷಗಳಿಂದ ಸಾಗುವಳಿ ಮಾಡುತ್ತಿವೆ. ಸರ್ಕಾರ ಈ ಜಮೀನನ್ನು ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ನಾಗನೂರು ಕೆ.ಎಂ. ಗ್ರಾಮದ ದಲಿತ ಸಮಾಜದವರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು. ಬಳಿಕ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಾಗನೂರು ಕೆ.ಎಂ. ಗ್ರಾಮದಲ್ಲಿ ಸುಮಾರು 30 ಕುಟುಂಬ 50 ವರ್ಷಗಳಿಂದ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಈ ಭೂಮಿ ಹೊರತುಪಡಿಸಿ ನಮಗೆ ಬೇರೆ ಜಮೀನಿಲ್ಲ. ನಮಗೆ ಕೂಲಿ ಬಿಟ್ಟರೆ ಬೇರೆ ಕೆಲಸ ಇಲ್ಲ. ಈ ಕುರಿತಂತೆ ಅರಣ್ಯ ಇಲಾಖೆಯವರು ನಮ್ಮ ಸಮುದಾಯದ 13 ಜನರ ಮೇಲೆ ಹುಕ್ಕೇರಿ ತಾಲೂಕು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ದಂಡ ಹಾಗೂ ಶಿಕ್ಷೆ ವಿಧಿಸಿದ್ದಾರೆ. ಹಾಗಾಗಿ ಸರ್ಕಾರ ಈ ಜಮೀನನ್ನು ಸಕ್ರಮ ಮಾಡಿಕೊಡಬೇಕು ಎಂದು ಒತ್ತಾ ಯಿಸಿದರು.
ಬಸವಣ್ಣಿ ಕಾಂಬಳೆ, ಸಿದ್ದಪ್ಪ ಕಾಂಬಳೆ, ನೀಲಪ್ಪ ಕಾಂಬಳೆ, ಚಂದ್ರಪ್ಪ ಕಾಂಬಳೆ, ಬಾಬು ಕಾಂಬಳೆ, ಗಣಪತಿ ಕಾಂಬಳೆ, ಎಸ್.ಎಸ್.ನಾಗನೂರೆ, ಶ್ರೀಮಂತ ನಾಗನೂರೆ, ಈರಪ್ಪ ಕಾಂಬಳೆ, ಗೋಪಾಲ ಚಿಕ್ಕೋಡಿ, ನಾಗಪ್ಪ ನಾಯಿಕ, ಹನುಮಂತ ಜಕ್ಕಾಯಿ, ರವೀಂದ್ರ ಕಾಂಬಳೆ, ಬಸವರಾಜ ಚವ್ಹಾಣ ಇತರರಿದ್ದರು.