

ಚಿತ್ರದುರ್ಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಕೊಲೆಗೈದಿರುವ ಘಟನೆ ಬುಧವಾರ ನಡೆದಿದೆ. ಮೃತಳನ್ನು ಚಳ್ಳಕೆರೆ ತಾಲೂಕು ಪರಶುರಾಂಪುರ ಠಾಣೆ ವ್ಯಾಪ್ತಿ ಹಾಲುಗೊಂಡನಹಳ್ಳಿ ಗ್ರಾಮದ ಈರಮ್ಮ(45) ಎಂದು ಗುರುತಿಸಲಾಗಿದೆ. ಈರಮ್ಮರ ಗಂ ಡನ ಅಣ್ಣ ಕಾಟಪ್ಪ ಚಂದ್ರಣ್ಣ(70)ಹಾಗೂ ಆತನ ಪುತ್ರ ಹಾಗೂ ಈರಮ್ಮಳ ನಡುವೆ ಜಮೀನು ವಿಚಾರದಲ್ಲಿ ಜಗಳವಾಗಿದ್ದು, ಈ ವೇಳೆ ಆ ರೋಪಿಗಳು ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು,ತೀವ್ರವಾಗಿ ಗಾಯಗೊಂಡಿದ್ದ ಈರಮ್ಮ ಸ್ಥಳದಲ್ಲೇ ಅಸು ನೀಗಿದ್ದಾಳೆ. ಜಗಳ ಬಿಡಿಸಲು ಬಂದಂಥ ಮೃತಳ ತಂಗಿ ಮಮತಾ ಹಾಗೂ ತಾಯಿ ಪುಟ್ಟಜ್ಜಿ ಗಾಯಗೊಂಡಿದ್ದಾರೆ. ಆರೋಪಿ ಚಂದ್ರಣ್ಣನ್ನು ಬಂಧಿಸಿ,ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.