ಜಮೀನು ಬಿಡಿಸಿಕೊಡಲು ಮನವಿ

Mahanayaka
Published on

ಚಿತ್ರದುರ್ಗ: ಹೊರವಲಯದ ಪಿಳ್ಳೆಕೇರನಹಳ್ಳಿಯಲ್ಲಿರುವ ದಲಿತರ ಜಮೀನಿನಲ್ಲಿ ಉಳ್ಳವರ ಕುಮ್ಮಕ್ಕಿನಿಂದ ಕೆಲವರು ಅತಿಕ್ರಮವಾಗಿ ಪ್ರವೇಶಿಸಿ, ಗುಡಿಸಲು ನಿರ್ಮಿಸಿಕೊಂಡಿರುವುದನ್ನು ತೆರವುಗೊಳಿಸುವಂತೆ, ಕಾನೂನು ಕ್ರಮವಹಿಸಿ ಬಿಡಿಸಿಕೊಡುವಂತೆ, ಸ್ಪಂದಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮಹಾನಾಯಕ ದಲಿತ ಸೇನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಿದರು. ಸೇನೆಯ ಅಧ್ಯಕ್ಷ ಮಂಜುನಾಥ್ ಎ.ತಾಳಿಕೆರೆ, ಪದಾಧಿಕಾರಿಗಳಾದ ಹೊಳೆಯಪ್ಪ ಕೆ. ಸಾಕ್ಯ, ಪ್ರದೀಪ್, ಕೆ.ಪೆನ್ನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net