

ಸುರಪುರ: ತಾಲೂಕಿನ ಕಣ್ವಮಠ ಮೂಲ ಮಹಾ ಸಂಸ್ಥಾನ ಹುಣಸಿಹೊಳೆ ಜಮೀನುಗಳ ಹಕ್ಕು ೨೦೧೫ರಿಂದ ೨೦೧೮ರಲ್ಲಿ ವರ್ಗಾವಣೆ ಮಾಡಿರುವವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀ ಮಠದ ಪ್ರತಿನಿಧಿಗಳು, ಕಣ್ವ ಮಠದ ವಿವಿಧ ಸಂಘ-ಸAಸ್ಥೆಗಳ ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಕಣ್ವಮಠಕ್ಕೆ ಸುಮಾರು ೨೦೦ ವರ್ಷಗಳ ಇತಿಹಾಸ ಇದೆ. ಕಣ್ವಮಠದ ಜಮೀನಿನ ಹಕ್ಕು ವರ್ಗಾವಣೆಯಲ್ಲಿ ೨೦೧೫ರಿಂದ ೨೦೧೮ನೇ ಸಾಲಿನಲ್ಲಿ ಅಧಿಕಾರಿಗಳು ಆಗಿನ ಪೀಠಾಧಿಪತಿಗಳೊಂದಿಗೆ ಶಾಮೀಲಾಗಿ ಜಮೀನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಆಗಿನ ಅಧಿಕಾರಿಗಳು ಕಂದಾಯ ಅಧಿನಿಯಮದ ನಿಯಮವನ್ನು ಗಾಳಿಗೆ ತೂರಿ ೭೦ಕ್ಕೂ ಹೆಚ್ಚು ಎಕರೆ ಭೂಮಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಣ್ವಮಠ ಲಕ್ಷಾಂತರ ಭಕ್ತ ಸಮೂಹ ಹೊಂದಿದ್ದು, ಧಾರ್ಮಿಕ ಸಮೂಹ ಆಗಿದ್ದರೂ ಇಂತಹ ಧಾರ್ಮಿಕ ಸಂಸ್ಥೆಗಳ ಜಮೀನು ವರ್ಗಾವಣೆ ಮಾಡಿದರೆ ಇನ್ನೂ ಸಾಮಾನ್ಯ ಜನರ ಪಾಡು ಏನಾಗಬಾರದು. ? ಅಲ್ಲದೆ ಇನ್ನೂ ಎಷ್ಟು ಜಮೀನು ಅಕ್ರಮವಾಗಿದೆ ಎಂಬ ಅನುಮಾನ ಜನರಲ್ಲಿ ಮೂಡಿದೆ ಎಂದರು.
ಜಮೀನು ವರ್ಗಾವಣೆ ಮಾಡಿದ ಅಧಿಕಾರಿಗಳ ವಿರುದ್ಧ ತಾವು ಸೂಕ್ತ ಕ್ರಮ ಕೈಗೊಂಡು, ಇದನ್ನು ಕೂಡಲೇ ರದ್ದುಪಡಿಸಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಭಕ್ತರಿಂದ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಖಿಲ ಭಾರತ ಕಣ್ವ ಪರಿಷದ್ ರಾಷ್ಟಿçÃಯ ಅಧ್ಯಕ್ಷ ಮನೋಹರ ಮಡಿಗೇರಿ, ಉಪಾಧ್ಯಕ್ಷ ರಂಗನಾಥ ಜೋಶಿ ಪುಣೆ, ಕಣ್ವ ಮಠದ ವಕೀಲ ಪ್ರಶಾಂಶ ಕುಲಕರ್ಣಿ ಸಿಂಧನೂರು, ಬೆಂಗಳೂರು ಶುಕ್ಲ ಯಜುರ್ವೇಧ ಶಾಖಾ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ, ಚಿಂತಾಮಣಿ ಯೋಗೇಶ್ವರ ಯಾಜ್ಞವಲ್ಕ ್ಯ ಟ್ರಸ್ಟ್ ಅಧ್ಯಕ್ಷ ಎನ್.ನಾಗರಾಜ ಇತರರಿದ್ದರು.